ವೃದ್ಧನ ಹೃದಯದ ಭಾಗಕ್ಕೆ ತಿವಿದ ಕಾಡುಕೋಣ: ವೃದ್ಧನ ಸ್ಥಿತಿ ಗಂಭೀರ

26/08/2023
ಚಿಕ್ಕಮಗಳೂರು: ಕಾಡುಕೋಣದ ದಾಳಿಯಿಂದ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮುಜೇಖಾನ್ ಗ್ರಾಮದಲ್ಲಿ ನಡೆದಿದೆ.
ಮರೀಗೌಡ (60) ಕಾಡುಕೋಣದ ದಾಳಿಗೊಳಗಾದ ವೃದ್ಧರಾಗಿದ್ದು, ಇವರು ಕಾಡಂಚಿನ ಗ್ರಾಮ ಮುಜೇಖಾನ್ ನಿಂದ ಕಳಸ ಬರುವಾಗ ಕಾಡುಕೋಣ ದಾಳಿ ನಡೆಸಿದೆ. ಸದ್ಯ ಕಳಸ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ.
ಕಾಡು ಕೋಣ ಮರೀಗೌಡ ಅವರ ಹೃದಯದ ಭಾಗಕ್ಕೆ ಬಲವಾಗಿ ತಿವಿದಿದ್ದು, ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳಸ ತಾಲೂಕಿನಲ್ಲಿ ಆಗಾಗ್ಗೆ ಕಾಡುಕೋಣ ದಾಳಿ ನಡೆಯುತ್ತಲೇ ಇವೆ, ಕಂಚಿನಕೆರೆ, ಮುಂಡಾನಿ, ಕಾಳಿಕೆರೆ, ಕೊಂಡದಮನೆ, ಗೊಡ್ಲುಮನೆ ಗ್ರಾಮಗಳು ಕಾಡುಪ್ರಾಣಿಗಳ ದಾಳಿಯಿಂದ ಕಂಗೆಟ್ಟಿದೆ.