ಗೃಹಲಕ್ಷ್ಮಿಯಿಂದ ಬದಲಾಯ್ತು ಜೀವನ: ಕೂಲಿ ಕೆಲಸ ಬಿಟ್ಟು ಕಿರಣಿ ಅಂಗಡಿ ಇಟ್ಟ ಮಹಿಳೆ - Mahanayaka

ಗೃಹಲಕ್ಷ್ಮಿಯಿಂದ ಬದಲಾಯ್ತು ಜೀವನ: ಕೂಲಿ ಕೆಲಸ ಬಿಟ್ಟು ಕಿರಣಿ ಅಂಗಡಿ ಇಟ್ಟ ಮಹಿಳೆ

gruha lakshmi scheme
21/04/2025


Provided by

ಯಾದಗಿರಿ: ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಮಹಿಳೆಯೊಬ್ಬರು ಕೂಲಿ ಕೆಲಸಕ್ಕೆ ಗುಡ್ ಬೈ ಹೇಳಿ, ಕಿರಾಣಿ ಅಂಗಡಿ ಇಟ್ಟು ವ್ಯಾಪಾರ ಕ್ಷೇತ್ರಕ್ಕೆ ಧುಮುಕಿದ್ದಾರೆ. ಇದು ಸಾಧ್ಯವಾಗಿರುವುದು ರಾಜ್ಯ ಸರ್ಕಾರದ ಪಂಚ  ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಿಂದ!

ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಮುಮ್ತಾಜ್ ಬೇಗಂ ಗೃಹ ಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಮನೆಯ ಮುಂದೆ ಚಿಕ್ಕದಾದ ಕಿರಾಣಿ ಅಂಗಡಿಯನ್ನ ಇಟ್ಟುಕೊಂಡು ಹೊಸ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ.

ತಿಂಗಳಿಗೆ 2 ಸಾವಿರ ಬಂದಂತ ಹಣವನ್ನ ಖರ್ಚು ಮಾಡದೆ ಜಮಾ ಮಾಡಿಕೊಂಡಿಟ್ಟುಕೊಂಡಿದ್ದ ಮಹಿಳೆ, ಸುಮಾರು 40 ಸಾವಿರಕ್ಕೂ ಅಧಿಕ ಹಣವನ್ನ ಕೂಡಿಟ್ಟಿದ್ದರು. ಈ ಎಲ್ಲ ಹಣವನ್ನು ಸೇರಿಸಿ ಮನೆಯ ಮುಂದೆ ಕಿರಣಿ ಅಂಗಡಿ ಹಾಕಿಕೊಂಡಿದ್ದಾರೆ.

ಅಂಗಡಿಯಲ್ಲಿ ಬಿಸ್ಕಾಟ್, ಚಾಕಲೇಟ್, ಅಡುಗೆಗೆ ಬಳಕೆಯಾಗುವ ಸಕ್ಕರೆ, ಹಿಟ್ಟು, ಅಕ್ಕಿ ಸೇರದಂತೆ ನಾನಾ ಪದಾರ್ಥಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಸದ್ಯ ತಮ್ಮ ಹೊಸ ಅಂಗಡಿಯಿಂದ ದಿನಕ್ಕೆ 300ರಿಂದ 400 ರೂಪಾಯಿ ಆದಾಯವನ್ನು ಗಳಿಸಲು ಮುಮ್ತಾಜ್ ಬೇಗಂ ಆರಂಭಿಸಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ  ಮುಮ್ತಾಜ್ ಬೇಗಂ ಕೃತಜ್ಞತೆ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ