ಈ ರಾಜ್ಯದಲ್ಲಿ ಲಿವ್ ಇನ್ ರಿಲೇಷನ್ ಷಿಪ್ ನೋಂದಣಿ ಕಡ್ಡಾಯ, ಪೋಷಕರ ಅನುಮತಿ ಕಡ್ಡಾಯ!

ಡೆಹ್ರಾಡೂನ್: 21 ವರ್ಷದೊಳಗಿನ ಜೋಡಿಗಳು ಲಿವ್ ಇನ್ ರಿಲೇಷನ್ ಷಿಪ್ ಬಯಸಿದರೆ, ಕಡ್ಡಾಯವಾಗಿ ಅದನ್ನು ನೋಂದಣಿ ಮಾಡಿಸಬೇಕು ಎಂದು ಉತ್ತರಾಖಂಡ ಸರ್ಕಾರ ಹೇಳಿದೆ.
ಉತ್ತರಾಖಂಡ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಮಸೂದೆ ಮಂಡಿಸಿದ್ದು, ಈ ಮಸೂದೆಯಲ್ಲಿ ಲಿವ್ ಇನ್ ರಿಲೇಷನ್ ಷಿಪ್ ಬಗ್ಗೆ ಉಲ್ಲೇಖಿಸಲಾಗಿದ್ದು, ಲಿವ್ ಇನ್ ರಿಲೇಷನ್ ಷಿಪ್ ಕಡ್ಡಾಯ ನೋಂದಣಿ ಮಾಡಿಸಿಕೊಳ್ಳಬೇಕು, ನೋಂದಣಿಗೆ ಪೋಷಕರ ಅನುಮತಿ ಕಡ್ಡಾಯವಾಗಿದೆ. ನೋಂದಣಿ ಮಾಡಿಸಿಕೊಳ್ಳದೇ ಲಿವ್ ಇನ್ ರಿಲೇಷನ್ ಷಿಪ್ ಮುಂದುವರಿಸುವ ಜೋಡಿಯನ್ನು ಜೈಲಿಗೆ ಕಳುಹಿಸಬಹುದು ಎನ್ನುವ ಕಠಿಣ ನಿಯಮ ಇದರಲ್ಲಿದೆ.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಒಟ್ಟಿಗೆ ವಾಸಿಸಲು ಬಯಸಿದ್ದರೆ ಅದಕ್ಕೆ ಪೋಷಕರ ಒಪ್ಪಿಗೆಯೂ ಅಗತ್ಯವಿದೆ. ಅಂತಹ ಸಂಬಂಧಗಳ ಕಡ್ಡಾಯ ನೋಂದಣಿಯು ಉತ್ತರಾಖಂಡದ ಯಾವುದೇ ನಿವಾಸಿಯು ರಾಜ್ಯದ ಹೊರಗೆ ಲಿವ್-ಇನ್ ಸಂಬಂಧದಲ್ಲಿದ್ದರೂ ಅದಕ್ಕೆ ವಿಸ್ತರಿಸುತ್ತದೆ ಎಂದು ಹೇಳಿದೆ.
ಲೀವ್ ಇನ್ ರಿಲೇಷನ್ ಷಿಪ್ ಸಾಮಾನ್ಯವಾಗಿ ನೋಂದಣಿ ಮಾಡದೇ ನಡೆಯುತ್ತದೆ. ಇಂತಹ ಸಂಬಂಧಗಳಲ್ಲಿ ಜೋಡಿಯಲ್ಲಿ ಒಬ್ಬರು ಮೊದಲೇ ವಿವಾಹಿತನಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ, ಒಬ್ಬರು ಅಪ್ರಾಪ್ತ ವಯಸ್ಕರಾಗಿದ್ದರೆ, ಅಥವಾ ಒಬ್ಬರ ಒಪ್ಪಿಗೆಯನ್ನು “ಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆ” ಇವೆಲ್ಲ ಶಿಕ್ಷಾರ್ಹ ಅಪರಾಧಗಳಾಗುತ್ತವೆ ಎಂದು ಹೇಳಲಾಗಿದೆ.