ಅಮೆರಿಕದ ಲಾಸ್ ಏಂಜಲೀಸ್‌ ನಲ್ಲಿ ಕಾಳ್ಗಿಚ್ಚು: ಜೀವಗಳ ಹರಣ, ಸೊತ್ತು ಭಸ್ಮ - Mahanayaka

ಅಮೆರಿಕದ ಲಾಸ್ ಏಂಜಲೀಸ್‌ ನಲ್ಲಿ ಕಾಳ್ಗಿಚ್ಚು: ಜೀವಗಳ ಹರಣ, ಸೊತ್ತು ಭಸ್ಮ

13/01/2025


Provided by

ಅಮೆರಿಕದ ಲಾಸ್ ಏಂಜಲೀಸ್‌ ವ್ಯಾಪಿಸಿರುವ ಕಾಳ್ಗಿಚ್ಚು ಇನ್ನು ಕೂಡ ಹತೋಟಿಗೆ ಬಂದಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು ಮನೆಗಳು ಸುಟ್ಟು ಕರಕಲಾಗಿದ್ದು, ಭಾರೀ ಪ್ರಮಾಣದ ಅರಣ್ಯ ಸುಟ್ಟುಹೋಗಿದೆ.

ಬುಧವಾರದವರೆಗೆ ಕಾಳ್ಗಿಚ್ಚು ಮತ್ತಷ್ಟು ವ್ಯಾಪಿಸುವ ಬಗ್ಗೆ ರಾಷ್ಟ್ರೀ ಯ ಹವಾಮಾನ ಸೇವೆಯುರೆಡ್ ಅಲರ್ಟ್ ಘೋಷಿಸಿದೆ.

ಸುಮಾರು ಗಂಟೆಗೆ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಪರ್ವತಗಳಲ್ಲಿ ಗಾಳಿ ವೇಗ ಗಂಟೆಗೆ 113 ಕಿ.ಮೀ ತಲುಪುತ್ತಿದೆ. ಹೀಗಾಗಿ ಲಾಸ್ ಏಂಜಲೀಸ್ನಲ್ಲಿ ಮಂಗಳವಾರ ಅತ್ಯಂತ ಅಪಾಯಕಾರಿ ದಿನವಾಗಿರಲಿದೆ ಎಂದು ಹವಾಮಾನ ಸೇವಾ ಕೇಂದ್ರದ ಹವಾಮಾನ ತಜ್ಞ ರಿಚ್ ಥಾಂಪ್ಸನ್ ಹೇಳಿದ್ದಾರೆ.

ಕಳೆದ ಎಂಟು ತಿಂಗಳಿಗಿಂತ ಈ ಪ್ರದೇಶದಲ್ಲಿ ಯಾವುದೇ ಗಮನಾರ್ಹ ಮಳೆಯಾಗದ ಕಾರಣ ನಗರದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಒಣಗಿದ್ದು, ಕಾಳ್ಗಿಚ್ಚು ಹಬ್ಬಲು ಕಾರಣವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ