ಮರಣೋತ್ತರ ಪರೀಕ್ಷೆಯ ವೇಳೆ ಮೃತದೇಹದೊಳಗಿಂದ ಹೊರ ಬಂದ ಜೀವಂತ ಹಾವು - Mahanayaka

ಮರಣೋತ್ತರ ಪರೀಕ್ಷೆಯ ವೇಳೆ ಮೃತದೇಹದೊಳಗಿಂದ ಹೊರ ಬಂದ ಜೀವಂತ ಹಾವು

living snake
06/12/2022

ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ಶವ ಪರೀಕ್ಷೆ ತಂತ್ರಜ್ಞರು, ಚಿತ್ರ ವಿಚಿತ್ರ ಸಂಗತಿಗಳನ್ನು ಕಂಡುಕೊಳ್ಳುವುದು ಸಾಮಾನ್ಯ. ಆದರೆ ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ಮೃತದೇಹದಿಂದ ಜೀವಂತ ಹಾವೊಂದು ಹೊರ ಬಂದಿದ್ದು, ಶವ ಪರೀಕ್ಷೆ ತಂತ್ರಜ್ಞೆ ಸ್ಥಳದಿಂದ ಕಿರುಚಿಕೊಂಡು ಓಡಿದ ಘಟನೆ ನಡೆದಿದೆ.

ಘಟನೆಯ ಬಗ್ಗೆ ವಿವರಿಸಿರುವ ಶವ ಪರೀಕ್ಷೆ ತಂತ್ರಜ್ಞೆ ಜೆಸ್ಸಿಕಾ ಲೋಗನ್, ನಾನು ಶವಪರೀಕ್ಷೆ ತಂತ್ರಜ್ಞೆಯಾಗಲು ಬಯಸದಿದ್ದರೂ,  ನನ್ನ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿದೆ. ಆದರೆ ಇಂತಹ ಅನುಭವ ಇದೇ ಮೊದಲ ಬಾರಿಗೆ ಆಗಿತ್ತು. ಶವ ಪರೀಕ್ಷೆ ಮಾಡಲು ಮುಂದಾಗುತ್ತಿದ್ದಂತೆಯೇ ಮೃತದೇಹದ ತೊಡೆಯಿಂದ ಜೀವಂತ ಹಾವು ಒಮ್ಮೆಲೇ ಹೊರ ಬಂತು,  ನಾನು ಬೆಚ್ಚಿ ಬಿದ್ದು, ಹುಚ್ಚಿಯಂತೆ ಕಿರುಚಾಡುತ್ತಾ, ಕೊಠಡಿಯಿಂದ ಹೊರಗೆ ಓಡಿ ಹೋದೆ. ಹಾವನ್ನು ಹಿಡಿಯುವ ವರೆಗೆ ನಾನು ಆ ಸ್ಥಳಕ್ಕೆ ಬಂದಿರಲಿಲ್ಲ ಎಂದು ಅವರು ಮಾಹಿತಿ ಹಂಚಿಕೊಂಡರು.

ಈ ಮೃತದೇಹ ಚರಂಡಿಯಲ್ಲಿ ದೊರೆತಿತ್ತು. ವ್ಯಕ್ತಿ ಸಾವನ್ನಪ್ಪಿದ ಬಳಿಕ ಮೃತದೇಹ ಚರಂಡಿಯಲ್ಲಿದ್ದ ವೇಳೆ  ಹಾವು ಮೃತದೇಹದೊಳಗೆ ಹೊಕ್ಕಿದೆ.  ಕೊಳೆತ ದೇಹದ ಮೇಲೆ ಮಾಂಸ ತಿನ್ನುವ ಕೀಟಗಳು, ಹುಳುಗಳು ಮುತ್ತಿಕೊಂಡಿರುತ್ತವೆ ಆದರೆ, ಹಾವು ಇರುವುದು ಇದೇ ಮೊದಲು ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ