ಸಂಸದರಾಗಿ ಮೋದಿ ಪ್ರಮಾಣ: ಇಂಡಿಯಾ ಒಕ್ಕೂಟದಿಂದ ‘ಚಾರ್ ಸೌ ಪಾರ್’ ಘೋಷಣೆ

ನೂತನ ಸಂಸತ್ ಭವನ ಸೆಂಟ್ರಲ್ ವಿಸ್ಟಾದಲ್ಲಿ ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಗೊಂಡಿತು.
ಪ್ರಮಾಣ ವಚನ ಸ್ವೀಕಾರದ ಸಂಪ್ರದಾಯದಂತೆ ಪ್ರಧಾನಿ ನರೇಂದ್ರ ಮೋದಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಲೋಕಸಭಾ ಸ್ಪೀಕರ್ ಮುಂದಿದ್ದ ಪೀಠದ ಮುಂದೆ ಬಂದಾಗ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟದ ಸದಸ್ಯರು ಸಂವಿಧಾನದ ಪ್ರತಿ ಪ್ರದರ್ಶಿಸಿ ‘ಚಾರ್ ಸೌ ಪಾರ್’ ಭಾಷಣ ನೆನಪಿಸಿದ್ದಾರೆ.
18ನೇ ಲೋಕಸಭೆಯ ಮೊದಲ ಅಧಿವೇಶನದ ಮೊದಲ ದಿನವೇ ಸಂಸತ್‌ನ ಒಳಗಡೆ ಮಾತ್ರವಲ್ಲದೇ, ಹೊರಗಡೆ ಕೂಡ ವಿಪಕ್ಷದ ಸಂಸದರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ನಾಯಕರು ಜೊತೆಯಾಗಿ ಸಂಸತ್ ಪ್ರವೇಶಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ವೇಳೆ ಎಲ್ಲ ನಾಯಕರು ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡಿದ್ದರು. “ನಾವು ಸಂವಿಧಾನ ಉಳಿಸುತ್ತೇವೆ’, ‘ಪ್ರಜಾಪ್ರಭುತ್ವ ಉಳಿಸಿ’, ‘ಲಾಂಗ್ ಲೈವ್ ಕಾನ್‌ಸ್ಟಿಟ್ಯೂಷನ್” ಎಂಬ ಘೋಷಣೆಗಳನ್ನು ಕೂಡ ಕೂಗಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth