ಬಿಜೆಪಿ-ಆರೆಸ್ಸೆಸ್ ನಾಯಕರ ಮುಸ್ಲಿಮರ ಜೊತೆಗಿನ ವೈವಾಹಿಕ ಸಂಬಂಧವನ್ನು ಕೆದಕಿದ ಡಿ.ಕೆ.ಶಿವಕುಮಾರ್ - Mahanayaka

ಬಿಜೆಪಿ-ಆರೆಸ್ಸೆಸ್ ನಾಯಕರ ಮುಸ್ಲಿಮರ ಜೊತೆಗಿನ ವೈವಾಹಿಕ ಸಂಬಂಧವನ್ನು ಕೆದಕಿದ ಡಿ.ಕೆ.ಶಿವಕುಮಾರ್

29/11/2020


Provided by

ಉಡುಪಿ: ಲವ್ ಜಿಹಾದ್ ವಿಚಾರದ ಬಗ್ಗೆ ಕಾನೂನು ತರುವ ಮೊದಲು ಯಾವ ನಾಯಕರು ಯಾರನ್ನು ವಿವಾಹವಾಗಿದ್ದಾರೆ ಎನ್ನುವುದನ್ನು ನೋಡಲಿ ಎಂದು, ಬಿಜೆಪಿ ಮುಖಂಡರು ಹಾಗೂ ಅವರ ಮಕ್ಕಳು ಮುಸ್ಲಿಮರ ಜೊತೆಗೆ ವೈವಾಹಿಕ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಟಾಂಗ್ ನೀಡಿದರು.

ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ  ಭಾಗವಹಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,  ಲವ್ ಜಿಹಾದ್ ಹಾಗೂ ಗೋ ಹತ್ಯೆ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ,  ಗೋ ಹತ್ಯೆ ಮಸೂದೆ ಹೊಸತೇನಲ್ಲ,  ಇದು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಲವ್ ಜಿಹಾದ್ ಗೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಬೇಕು, ಯಾರ ಮಕ್ಕಳನ್ನು ಯಾರು ವಿವಾಹವಾಗಿದ್ದಾರೆ ಎನ್ನುವುದನ್ನು ಮೊದಲು ನೋಡಲಿ ಎಂದು ಅವರು, ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಮುಸ್ಲಿಮರ ಜೊತೆಗೆ ವೈವಾಹಿಕ ಸಂಬಂಧವನ್ನು ಹೊಂದಿರುವ ವಿಚಾರವನ್ನು ಕೆದಕಿದರು.

ಇದು ಭಾರತ. ಇಲ್ಲಿನ ಜನರು ಯಾವುದೇ ಪಕ್ಷಕ್ಕೆ ಸೇರಿದವರಿರಬಹುದು. ಆದರೆ, ಧರ್ಮದ ಆಯ್ಕೆ ಅವರವರ ಹಕ್ಕಾಗಿದೆ. ಈ ದೇಶದಲ್ಲಿ ಪ್ರೀತಿ, ನಂಬಿಕೆ ಮತ್ತು ಮಾನವೀಯತೆ ಬಹಳ ಮುಖ್ಯವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇತ್ತೀಚಿನ ಸುದ್ದಿ