ಇನ್ಸ್ಟಾಗ್ರಾಮ್ ನಲ್ಲಿ ಲವ್ವು!: ಪ್ರಿಯತಮೆಯನ್ನು ಹುಡುಕಿಕೊಂಡು ಬಂದ ಪ್ರಿಯಕರನಿಗೆ ಶಾಕ್!

ಮೂಡಿಗೆರೆ : ಇವನದ್ದು ಇನ್ಸ್ಟಾಗ್ರಾಮ್ ನಲ್ಲಿ ಹುಟ್ಟಿಕೊಂಡ ಲವ್. ಮದ್ವೆಯಾಗುವ ಮಟ್ಟಕ್ಕೆ ಒಬ್ಬರನ್ನೊಬ್ರು ಹಚ್ಕೊಂಡಿದ್ರು.. ಪ್ರಿಯತಮೆಯನ್ನ ಹುಡುಕಿಕೊಂಡು ಬಂದ ಯುವಕನಿಗೆ ಬಿಗ್ ಶಾಕ್ ಕಾದಿತ್ತು. ಪ್ರಿಯತಮೆ ಹುಡಿಕೊಂಡು ಬಂದ ಯುವಕ ಸತ್ಯ ತಿಳಿದು ನ್ಯಾಯ ಕೊಡಿಸುವಂತೆ ಎಸ್ಪಿ ಕಚೇರಿಗೆ ಬಂದಿದ್ದಾನೆ.. ಅಷ್ಟಕ್ಕೂ ಇಲ್ಲಿ ಆಗಿರೋದೇನು..? ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ..
ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದವ್ರನ್ನೂ ಒಂದು ಮಾಡೊ ಪ್ರೇಮ ಕೊಂಡಿಯಾಗಿ ಬದಲಾಗ್ತಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ, ಪರಿಚಯ ಪ್ರೇಮವಾಗಿ, ಒಬ್ರನ್ನೊಬ್ರು ಮದುವೆಯಾಗಿ ಬದುಕು ಕಟ್ಟಿಕೊಂಡ ಜೋಡಿಗಳೆಷ್ಟೋ. ಅದೇ ಸೋಶಿಯಲ್ ಮೀಡಿಯಾದಲ್ಲಿ ಬಣ್ಣ ಬಣ್ಣದ ತಳುಕು ಬಳುಕಿನ ಫೋಟೋ, ರೀಲ್ಸ್ ನೋಡಿ ಮಾಯಾಂಗನೆಯರ ಮೋಹಕ್ಕೆ ಬಿದ್ದು ದುಡ್ಡು, ಜೀವನ ಎರಡನ್ನೂ ಕಳ್ಕೊಂಡವ್ರಿಗೇನೂ ಕಮ್ಮಿ ಇಲ್ಲ.. ಅಷ್ಟಕ್ಕೂ ಇದನ್ನ ಯಾಕೆ ಹೇಳ್ತಿದ್ದೀವಂದ್ರೆ.. ಇಲ್ಲಿ ನೋಡಿ.. ಒಂಟಿಯಾಗಿ ಚಿಕ್ಕಮಗಳೂರು ಎಸ್ಪಿ ಕಚೇರಿಗೆ ಬರ್ತಿರೋ ಈ ಹುಡುಗನ್ನ ಒಮ್ಮೆ ನೋಡಿ.. ಇವನು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ಗ್ರಾಮದ ನಿವಾಸಿ ಈತನಿಗೆ 25 ವರ್ಷ ಇವನ ಹೆಸರು ನವನೀತ್.. ಹೌದು ಇದೇ ನವನೀತ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಅಪೂರ್ವಳ ಪರಿಚಯವಾಗಿದೆ.. ಪರಿಚಯವಾಗಿ ಇಬ್ಬರ ನಡುವೆ ಪ್ರೇಮಹುಟ್ಟಿದ್ದು.. ಪರಸ್ಪರ ಮದುವೆಯಾಗೋದಾಗಿ ನಂಬಿಸಿದ್ದ ನಂಬಿಸಿ. ಇವನಿಂದ ಹಣವನ್ನೂ ಹಾಕಿಸ್ಕೊಂಡಿದ್ದಾಳೆ.. ಆದ್ರೆ ಕಳೆದ ಕೆಲ ದಿನಗಳಿಂದ ಈ ನವನೀತ ನಂಬರ್ ಬ್ಲಾಕ್ ಮಾಡಿದ್ದಾಳೆ.. ನಂಬರ್ ಬ್ಲಾಕ್ ಆಗಿದೆ ಅಂತಾ ಪ್ರಿಯತಮೆಯನ್ನ ಹುಡಿಕೊಂಡು ಬಂದ ನವನೀತ್ ತನ್ನ ಪ್ರಿಯತಮೆಯ ಬಗ್ಗೆ ತಿಳಿದು ಕಂಗಾಲಾಗಿದ್ದಾನೆ..
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ನವನೀತ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆಯ ಅಪೂರ್ವಾ ಇಬ್ಬರ ಮಧ್ಯ ಪ್ರೇಮಾಂಕುರವಾಗಿ ಮದುವೆಯಾಗೋದಾಗಿ ನಿರ್ಧರಿಸಿದ್ರು. 6 ತಿಂಗಳು ಬಿಟ್ಟು ಮದುವೆಯಾಗೋದಾಗಿ ಹೇಳಿದ್ದ ಅಪೂರ್ವ ಇದ್ದಕ್ಕಿದ್ದಂತೆ ನವನೀತನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾಳೆ.. ಯಾವಾಗ ನಂಬರ್ ಬ್ಲಾಕ್ ಆಯ್ತೋ ಆಗ ಪ್ರಿಯಮೆಯನ್ನ ಹುಡುಕಿಕೊಂಡು ಹೊಸಕೆರೆ ಗ್ರಾಮಕ್ಕೆ ಬಂದ ನವನೀತ್ ಗೆ ಅಸಲಿ ಸತ್ಯ ತಿಳಿದಿದೆ.. ಹೌದು ಈ ಅಪೂರ್ವಾಗೆ ಈಗಾಗ್ಲೆ ಮದುವೆಯಾಗಿ 3 ಮಕ್ಕಳಿದ್ದು.. ಇದನ್ನ ಅವಳು ಈತನಿಂದ ಮುಚ್ಚಿಟ್ಟಿದ್ದಾಳೆ.. ಯಾವಾಗ ತಾನು ಹುಡುಕಿಕೊಂಡು ಬಂದ ಪ್ರಿಯತಮೆ ಹುಡುಗಿ ಅಲ್ಲ.. ಗೃಹಿಣಿ ಅನ್ನೋದು ಗೊತ್ತಾಯ್ತೋ ಕಂಗಾಲಾದ ನವನೀತ್ ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ದೂರು ಕೊಟ್ಟಿದ್ದು. ಮದುವೆಯಾಗಿದ್ರೆ ಏನಂತೆ.. ಅವಳನ್ನೇ ಮದುವೆಯಾಗ್ತೀನಿ, ಮಕ್ಕಳನ್ನೂ ಸಾಕ್ತೀನಿ ಅಂತಿದ್ದಾನೆ..
ಒಟ್ನಲ್ಲಿ ಕೆಲಸ ಬಿಟ್ಟು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ತನ್ನ ಪ್ರಿಯತಮೆಯನ್ನ ಹುಡುಕಿಕೊಂಡು ಮಂಗಳೂರು ಬೆಂಗಳೂರು ಸುತ್ತಿ ಕೊನೆಗೆ ಚಿಕ್ಕಮಗಳೂರಿಗೆ ಬಂದ ಯುವಕನಿಗೆ ಪ್ರಿಯತಮೆಯ ಅಸಲಿ ಸತ್ಯ ತಿಳಿದು ಕಂಗಾಲಾಗಿದ್ದು.. 3 ಮಕ್ಕಳ ತಾಯಿ ಆದ್ರೂ ಓಕೆ ಅವಳನ್ನೇ ಮದುವೆಯಾಗ್ತೀನಿ ಮಕ್ಕಳನ್ನೂ ಸಾಕ್ತೀನಿ ಅಂತಿದ್ದು.. ಸೋಷಿಯಲ್ ಮೀಡಿಯಾ ಅನ್ನೋದು ಕೆಲವರ ಪಾಲಿಗೆ ಸಂಪರ್ಕ ಕೊಂಡಿಯಾದ್ರೆ ಮತ್ತೆ ಕೆಲವರ ಬಾಳನ್ನ ಅದೇ ಕೊಂಡಿಯಲ್ಲಿ ಕಣ್ಮರೆಯಾಗಿಸ್ತಿದೆ ಅನ್ನೋದು ಮಾತ್ರ ಸುಳ್ಳಲ್ಲ…
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD