ಮದುವೆಗೆ ಒಪ್ಪದ ವಿವಾಹಿತೆಯ ಮನೆಗೆ ಬೆಂಕಿಯಿಟ್ಟ ಪ್ರೇಮಿ - Mahanayaka

ಮದುವೆಗೆ ಒಪ್ಪದ ವಿವಾಹಿತೆಯ ಮನೆಗೆ ಬೆಂಕಿಯಿಟ್ಟ ಪ್ರೇಮಿ

fire
02/05/2024


Provided by

ಬೆಂಗಳೂರು: ಮದುವೆಯಾಗಲು ಒಪ್ಪದ ವಿವಾಹಿತೆಯ ಮನೆಗೆ ಪ್ರೇಮಿಯೊಬ್ಬ ಬೆಂಕಿಯಿಟ್ಟ ವಿಚಿತ್ರ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಸಾರಾಯಿಪಾಳ್ಯದಲ್ಲಿ ನಡೆದಿದೆ. ಮನೆಗೆ  ಬೆಂಕಿಯಿಟ್ಟ ಪಾಪಿ ಪ್ರೇಮಿಯನ್ನು ಅರ್ಬಾಜ್ ಎಂದು ಗುರುತಿಸಲಾಗಿದೆ.

ಆತ ಒಬ್ಬ ಪಾಗಲ್ ಪ್ರೇಮಿಯಾಗಿದ್ದ ಎನ್ನಲಾಗಿದೆ. ವಿವಾಹಿತೆಯನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ ಆದರೆ ವಿವಾಹಿತೆ ಮಹಿಳೆ  ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅರ್ಬಜ್ ವಿವಾಹಿತೆ ಮನೆಗೆ ಬೆಂಕಿ ಹಚ್ಚಿದ್ದಾನೆ.

ಅರ್ಬಜ್ ಮಹಿಳೆಯ ದೂರದ ಸಂಬಂಧಿಯಾಗಿದ್ದಾನೆ. ಈತ ಮದುವೆಯಾಗು ಎಂದು ಮಹಿಳೆಯ ಹಿಂದೆ ಬಿದ್ದಿದ್ದು, ಈ ಬಗ್ಗೆ ಎರಡು ಕುಟುಂಬದ ಹಿರಿಯರು ಆತನಿಗೆ ಬುದ್ಧಿ ಮಾತನ್ನು ಹೇಳಿದ್ದರು. ಆದರೆ ಯಾರ ಮಾತನ್ನು ಕೇಳದೆ ಈತ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಯಾರು ಇಲ್ಲದಿದ್ದ ಸಂದರ್ಭದಲ್ಲಿ ಬೆಂಕಿ ಹಚ್ಚಿದ್ದರಿಂದ ಭಾರಿ ಅನಾಹುತ ತಪ್ಪಿದೆ.ಆದರೆ ಬೆಂಕಿಯಿಟ್ಟ ಪರಿಣಾಮ ಮನೆಯಲ್ಲಿದ್ದ ಬಟ್ಟೆ ಟಿವಿ, ಫ್ರಿಡ್ಜ್ ಗಳು ಬೆಂಕಿಗೆ ಆಹುತಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಪೊಲೀಸರು ಅರ್ಬಾಜ್ನನ್ನು ಬಂಧಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ