ಪ್ರೇಯಸಿಯ ಹುಟ್ಟು ಹಬ್ಬದ ಆಚರಿಸಿದ ಬಳಿಕ ಕತ್ತುಕೊಯ್ದು ಬರ್ಬರ ಹತ್ಯೆ ಮಾಡಿದ ಪ್ರಿಯಕರ - Mahanayaka
12:10 PM Wednesday 22 - October 2025

ಪ್ರೇಯಸಿಯ ಹುಟ್ಟು ಹಬ್ಬದ ಆಚರಿಸಿದ ಬಳಿಕ ಕತ್ತುಕೊಯ್ದು ಬರ್ಬರ ಹತ್ಯೆ ಮಾಡಿದ ಪ್ರಿಯಕರ

bengalore
15/04/2023

ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿದ ಬಳಿಕ ಪಾಗಲ್ ಪ್ರಿಯಕರ  ಆಕೆಯ ಕತ್ತನ್ನು ಕೊಯ್ದು ಹತ್ಯೆ  ನಡೆಸಿರುವ ವಿಚಿತ್ರ ಘಟನೆ ಬೆಂಗಳೂರಿನ  ಲಗ್ಗೆರೆಯಲ್ಲಿ ನಡೆದಿದೆ.

ನವ್ಯ (25) ಕೊಲೆಯಾದ ಯುವತಿಯಾಗಿದ್ದು, ಆಕೆಯ ಪ್ರಿಯಕರ ಪ್ರಶಾಂತ್ ಹತ್ಯೆ ಮಾಡಿದ್ದಾನೆ. ಯುವತಿ ಬೇರೊಬ್ಬನ ಜೊತೆ ಚಾಟ್ ಮಾಡುತ್ತಿದ್ದಳು ಎಂಬ ಅನುಮಾನದ ಹಿನ್ನೆಲೆ ಪ್ರಶಾಂತ್ ಕೃತ್ಯ ಎಸಗಿದ್ದಾನೆ.

ನವ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಳು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರಾಗಿದ್ದು, ದೂರದ ಸಂಬಂಧಿಗಳಾಗಿದ್ದರು. ಮಾತ್ರವಲ್ಲದೇ ಇಬ್ಬರೂ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಕಳೆದ ಮಂಗಳವಾರ ನವ್ಯ ಹುಟ್ಟುಹಬ್ಬ ಇತ್ತು. ಅಂದು ಆಕೆ ಬ್ಯುಸಿ ಇದ್ದ ಕಾರಣ ಪ್ರಶಾಂತ್ ಶುಕ್ರವಾರ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದ. ಅದರಂತೆಯೇ ಶುಕ್ರವಾರ ರಾತ್ರಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ. ಪ್ರೇಯಸಿಯ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ಬಳಿಕ ಪ್ರಶಾಂತ್ ಆಕೆಯ ಕತ್ತನ್ನು ಕೊಯ್ದು ಹತ್ಯೆ ಮಾಡಿದ್ದಾನೆ.

ಘಟನೆ ಬಗ್ಗೆ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ