ಜಾತಿಯನ್ನು ಮೀರಿದ ಪ್ರೀತಿ: ಸೂಕ್ತ ರಕ್ಷಣೆ ಕೋರಿ ಎಸ್ ಪಿ ಕಛೇರಿಗೆ ಆಗಮಿಸಿದ ಪ್ರೇಮಿಗಳು! - Mahanayaka

ಜಾತಿಯನ್ನು ಮೀರಿದ ಪ್ರೀತಿ: ಸೂಕ್ತ ರಕ್ಷಣೆ ಕೋರಿ ಎಸ್ ಪಿ ಕಛೇರಿಗೆ ಆಗಮಿಸಿದ ಪ್ರೇಮಿಗಳು!

Lovers
18/12/2024


Provided by

ಚಿಕ್ಕಮಗಳೂರು:  ಅಂತರ್ ಜಾತಿ ವಿವಾಹಕ್ಕೆ ಯುವಕ, ಯುವತಿ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರೇಮಿಗಳು ಸೂಕ್ತ ರಕ್ಷಣೆ ಕೋರಿ ಎಸ್ ಪಿ ಕಛೇರಿಗೆ ಆಗಮಿಸಿದ ಘಟನೆ ನಡೆದಿದೆ.

ಭದ್ರಾವತಿ ಮೂಲದ ಯುವತಿ ಶಾಲಿನಿ, ತರೀಕೆರೆ ಮೂಲದ ಯುವಕ ಅಜಯ್ ಪೊಲೀಸರ ರಕ್ಷಣೆ ಕೇಳಿದ ಜೋಡಿಯಾಗಿದ್ದಾರೆ.

ದಲಿತ ಸಮುದಾಯದ ಹುಡುಗಿ ಹಾಗೂ ಒಕ್ಕಲಿಗ ಸಮಾಜದ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ,  ಪೋಷಕರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪೋಷಕರ ವಿರೋಧ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ ಪೋಷಕರು ಅಡ್ಡಿಪಡಿಸಿದ ಹಿನ್ನೆಲೆ ಜೋಡಿ ಮತ್ತೊಮ್ಮೆ  ಎಸ್ ಪಿ ಕಚೇರಿಯಲ್ಲಿ ಪರಸ್ಪರ ಹಾರ ಬದಲಿಸಿಕೊಂಡು ವಿವಾಹವಾದರು.

ಅಜಯ್ ತರೀಕೆರೆ ತಾಲೂಕಿನ ರಂಗನೇಹಳ್ಳಿಯ ನಿವಾಸಿಯಾಗಿದ್ದು, ಶಾಲಿನಿ ಭದ್ರಾವತಿ ಪಟ್ಟಣ ನಿವಾಸಿಯಾಗಿದ್ದಾರೆ. ಇವರಿಬ್ಬರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಪರಸ್ಪರ ಪ್ರೀತಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ