ಪಿಡಿಒ, ಅಧಿಕಾರಿಗಳಿಗೆ ಲಂಚ್ ಪಾರ್ಟಿ ಕೊಡಿಸಿದ ಸಚಿವ ವಿ.ಸೋಮಣ್ಣ - Mahanayaka

ಪಿಡಿಒ, ಅಧಿಕಾರಿಗಳಿಗೆ ಲಂಚ್ ಪಾರ್ಟಿ ಕೊಡಿಸಿದ ಸಚಿವ ವಿ.ಸೋಮಣ್ಣ

somanna
07/01/2023


Provided by

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ಭರ್ಜರಿ ಮಧ್ಯಾಹ್ನದ ಔತಣಕೂಟವನ್ನು ನೀಡಿದ್ದಾರೆ.

ಚಾಮರಾಜನಗರ ಹಾಗೂ ಹನೂರಿನ ಸಿಎಂ ಕಾರ್ಯಕ್ರಮ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪಿಡಿಒಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವ ವಿ‌.ಸೋಮಣ್ಣ ಅವರಿಂದು ಸಸ್ಯಹಾರಿ ಹಾಗೂ ಮಾಂಸಹಾರಿ ಔತಣಕೂಟ ಕೊಟ್ಟಿದ್ದಾರೆ.

ಮಾಂಸಹಾರಿ ವಿಭಾಗದಲ್ಲಿ ಒಂದು ಸ್ವೀಟ್, ಪಾಯಸ, ಚಿಕನ್, ಮಟನ್, ರೋಟಿ, ಗೀ ರೈಸ್, ರೈಸ್ ಸಸ್ಯಹಾರಿ ವಿಭಾಗದಲ್ಲಿ ಹೋಳಿಗೆ ಊಟ ಕೊಡಲಾಗಿದೆ.

ಪಿಡಿಒಗಳಿಗೆ ಪಾಠ: ಭೋಜನಕೂಟಕ್ಕೂ ಮುನ್ನ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿ, ಬರೀ ಕೃಷ್ಣನ ಲೆಕ್ಕವನ್ನೂ ಮಾಡದೇ  ಶೇ.60 ಆದರೂ ರಾಮನ ಲೆಕ್ಕ ಕೊಡಿ, ಬಡವರಿಗೆ ಕಣ್ಣೀರು ಹಾಕಿಸಬೇಡಿ, 500–1000ಕ್ಕಾಗಿ ಬಡವರು ಕಚೇರಿ ಅಲೆಯುವಂತೆ ಮಾಡಬೇಡಿ ಎಂದು ಪಾಠ ಮಾಡಿದರು.

ನಾನು ಗುಮಾಸ್ತನಾಗಿ ಆಯ್ಕೆಯಾಗಿದ್ದೆ ನನ್ನಮ್ಮ‌ ನೌಕರಿಗೆ ಹೋಗು ಎಂದಿದ್ರು ಆದರೆ ನನ್ನ ದೊಡ್ಡಕ್ಕ ಬೆಂಗಳೂರು ಬಿಟ್ಡು ಹೋಗಬೇಡ ಡಿಗ್ರಿ ಮಾಡು ಎಂದು ಬುದ್ದಿವಾದ ಹೇಳಿದ್ದಕ್ಕೆ ಮಂತ್ರಿಯಾದೆ, ಕಸ್ತೂರಿ ಮಾತ್ರೆಯನ್ನೂ ಮಾರಿದ್ದೇನೆ, 8 ರೂ. ಬಾಡಿಗೆ ಮನೆಯಲ್ಲೂ ಇದ್ದೆ. ಮಂತ್ರಿ ಆಗಬಹುದು ಆದರೆ ನಿಮ್ಮ ರೀತಿ ಅಧಿಕಾರಿಗಳಾಗಲೂ ಎಲ್ಲರ ಕೈಯಲ್ಲೂ ಸಾಧ್ಯವಿಲ್ಲ, ದೇವರು ಕೊಟ್ಟ ವಿಶೇಷ ಅವಕಾಶವನ್ನು ಬಡವರಿಗಾಗಿ ಕೆಲಸ ಮಾಡಿ ಎಂದು ಬುದ್ಧಿಮಾತು ಹೇಳಿದರು. ಶಾಸಕರುಗಳಾದ ನಿರಂಜನಕುಮಾರ್, ನರೇಂದ್ರ ಹಾಗೂ ಪುಟ್ಟರಂಗಶೆಟ್ಟಿ ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ