ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: ವರ್ಷದ ಬಳಿಕ ಆರೋಪಿ ಬಂಧನ‌ - Mahanayaka
2:49 AM Wednesday 29 - October 2025

ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: ವರ್ಷದ ಬಳಿಕ ಆರೋಪಿ ಬಂಧನ‌

madahalli gudda
29/03/2023

ಚಾಮರಾಜನಗರ: ಕಳೆದ ವರ್ಷ ಸಂಭವಿಸಿದ್ದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣದ ಪ್ರಮುಖ ಆರೋಪಿಯನ್ನು ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಉಪಗುತ್ತಿಗೆ ಪಡೆದು ಕ್ವಾರಿ ನಡೆಸುತ್ತಿದ್ದ ಮಹಮ್ಮದ್ ಹಕೀಂ ಹಾಗೂ ಮಹಮ್ಮದ್ ಹಿಲಾಲ್ ಬಂಧಿತ ಆರೋಪಿಗಳು. ಕಳೆದ ಒಂದು ವರ್ಷದಿಂದಲೂ ದುರಂತದ ಪ್ರಮುಖ ಆರೋಪಿ ಹಕೀಂ‌ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದನು. ಆರೋಪಿ ಬಂಧನವಾಗದಿರುವ ಬಗ್ಗೆ ಪೊಲೀಸರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಕೇರಳದ ಗುರುವಾಯೂರಿನಲ್ಲಿದ್ದ ಹಕೀಂ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿದ್ದ ಹಿಲಾಲ್ ನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿ ಮಂಗಳವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ವರ್ಷದ ಮಾರ್ಚ್ 4 ರಂದು ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದ  ಕಲ್ಲುಕ್ವಾರಿ ಕುಸಿದು ಉತ್ತರ ಪ್ರದೇಶ ಮೂಲದ ಬಬ್ಲು, ಮೀರಜ್ ಹಾಗೂ ಸರ್ಫರಾಜ್ ಎಂಬ ಕಾರ್ಮಿಕರು ಕಲ್ಲಿನಡಿ ಸಿಲುಕಿ ಹತರಾಗಿದ್ದರು‌. ದುರಾಸೆ ಆಸೆಯಿಂದ ಅವೈಜ್ಞಾನಿಕವಾಗಿ ಕ್ವಾರಿ ನಡೆಸಿದ್ದು ದುರಂತಕ್ಕೆ ಕಾರಣವಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ