ಇಬ್ಬರು ಮಕ್ಕಳನ್ನು ಬೆತ್ತಲಾಗಿಸಿ ಬಲಿಕೊಟ್ಟ ಘಟನೆಯನ್ನೇ ಹೋಲುವ ಮತ್ತೊಂದು ಘಟನೆ | ಒಂದರ ಹಿಂದೊಂದರಂತೆ ನಡೆಯುತ್ತಿದೆ ವಿಚಿತ್ರ ಘಟನೆ! - Mahanayaka
5:54 AM Thursday 16 - October 2025

ಇಬ್ಬರು ಮಕ್ಕಳನ್ನು ಬೆತ್ತಲಾಗಿಸಿ ಬಲಿಕೊಟ್ಟ ಘಟನೆಯನ್ನೇ ಹೋಲುವ ಮತ್ತೊಂದು ಘಟನೆ | ಒಂದರ ಹಿಂದೊಂದರಂತೆ ನಡೆಯುತ್ತಿದೆ ವಿಚಿತ್ರ ಘಟನೆ!

30/01/2021

ಆಂಧ್ರಪ್ರದೇಶ: ಮೊನ್ನೆಯಷ್ಟೇ ತಮ್ಮ ಇಬ್ಬರು ಮಕ್ಕಳನ್ನು  ಮಧ್ಯರಾತ್ರಿ ಬೆತ್ತಲೆಗೊಳಿಸಿ ಹತ್ಯೆ ಮಾಡಿದ್ದ ದಂಪತಿ ಪ್ರಕರಣ ಹಸಿಯಾಗಿರುವಂತೆಯೇ ಇದರ ನಡುವೆ ಇನ್ನೊಂದು ಇಂತಹದ್ದೇ ವಿಚಿತ್ರ ಘಟನೆ ನಡೆದಿದೆ.


Provided by

ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಒಂದರ ಹಿಂದೊಂದರಂತೆ ಮೌಢ್ಯತೆಯ ಪರಮಾವಧಿ  ಎಂಬಂತೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿವೆ. ಗಂಗಾವರಂ ವಲಯದ ಮಾರ್ಚೆಪಲ್ಲಿ ಗ್ರಾಮದ ಗಣೇಶ್ ಎಂಬ ಯುವಕನೋರ್ವ ಇದೀಗ ಇಂತಹ ವಿಚಿತ್ರ ಘಟನೆಗೆ ಸುದ್ದಿಯಾಗಿದ್ದಾನೆ.

ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಗಣೇಶ್, ಜನವರಿ 21ರಂದು ಮನೆ ಬಿಟ್ಟು ಹೋಗಿದ್ದಾನೆ. ಈತ ಮನೆ ಬಿಟ್ಟು ಹೋಗುವ ವೇಳೆ ಪೋಷಕರಿಗೆ ಪತ್ರ ಬರೆದು ಹೋಗಿದ್ದು, ಈ ಪತ್ರದಲ್ಲಿರುವ ವಿಚಾರಗಳನ್ನು ನೋಡಿ ಪೋಷಕರು ಬೆಚ್ಚಿ ಬಿದ್ದಿದ್ದಾರೆ.

ನಾನು ಕಾಣಲಿಲ್ಲ ಎಂದು ಯಾರೂ ಭಯಪಡಬೇಡಿ, ಚಿಂತಿಸಬೇಡಿ, ನನ್ನ ತಮ್ಮನಿಗೆ ಮಗನಾಗಿ ನಾನು ಮತ್ತೆ ಹುಟ್ಟಿಬರುತ್ತೇನೆ ಎಂದು ಬರೆದಿದ್ದು, ನಾನು ದೇವರ ಬಳಿಗೆ ಹೋಗುತ್ತಿದ್ದೇನೆ ಬರೆದಿದ್ದಾನೆ.

ಗಣೇಶ್ ಗೆ ದೇವರ ಮೇಲೆ ಅಪಾರವಾದ ಭಕ್ತಿಯೋ, ಮೂಢನಂಬಿಕೆಯೋ ಇತ್ತು.  ಮದವಪಲ್ಲಿಯಲ್ಲಿ ಬೆತ್ತಲೆ ಪೂಜೆ ನಡೆಸಿ ಇಬ್ಬರು ಮಕ್ಕಳನ್ನು ಕೊಂದ ಪ್ರಕರಣವನ್ನು ಗಮನಿಸಿದ್ದ ಗಣೇಶ್ ಈ ಘಟನೆಯ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸಿದ್ದನಂತೆ.

ಒಂದೇ ಊರಿನಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸುವುದನ್ನು ಗಮನಿಸಿದರೆ. ಇಂತಹದ್ದೊಂದು ಮನಸ್ಥಿತಿಯನ್ನು ಸೃಷ್ಟಿಸುತ್ತಿರುವ ವ್ಯಕ್ತಿಗಳು ಯಾರೋ ತೆರೆಮರೆಯಲ್ಲಿದ್ದಾರೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ.

ಇತ್ತೀಚಿನ ಸುದ್ದಿ