ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಮದರಸಾ ಶಿಕ್ಷಣ ಮಂಡಳಿ ತೀರ್ಮಾನ - Mahanayaka
8:05 AM Tuesday 9 - September 2025

ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಮದರಸಾ ಶಿಕ್ಷಣ ಮಂಡಳಿ ತೀರ್ಮಾನ

madrasa
25/03/2022

ಲಕ್ನೋ: ಉತ್ತರ ಪ್ರದೇಶದಾದ್ಯಂತ ಇರುವ ಮದರಸಾಗಳಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮುನ್ನ ಬೆಳಗ್ಗೆ ಪ್ರಾರ್ಥನಾ ಗೀತೆಯೊಂದಿಗೆ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಪಠಿಸಬೇಕು ಎಂದು ಮದರಸಾ ಶಿಕ್ಷಣ ಮಂಡಳಿಯು ತಿಳಿಸಿದೆ.


Provided by

ಶಿಕ್ಷಣ ಮಂಡಳಿಯು ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಜಾವೇದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಜರಾತಿ ಮತ್ತು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಲವಾರು ಇತರ ನಿರ್ಧಾರಗಳನ್ನು ತೀರ್ಮಾನಿಸಿದೆ. ಅಲ್ಲದೇ ಮದ್ರಸಾ ಶಿಕ್ಷಕರಾಗಲು (ಟಿಇಟಿ) ಪರೀಕ್ಷೆ ಬರೆದು ಅರ್ಹತೆ ಪಡೆದಿರಬೇಕು ಎಂದು ಸೂಚಿಸಲಾಗಿದೆ.

ಶಿಕ್ಷಕರ ನೇಮಕಾತಿಯಲ್ಲಿ ಸ್ವಜನಪಕ್ಷಪಾತವು ಇರಬಾರದು ಆದೇಶವಾಗಿದೆ. ಇದಕ್ಕಾಗಿಯೇ ಮಂಡಳಿಯು ಎಂಟಿಇಟಿ ಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ಆದರೆ ಆಯ್ಕೆ ಪ್ರಕ್ರಿಯೆಯನ್ನು ಶಿಕ್ಷಣ ಆಡಳಿತ ಮಂಡಳಿಯು ಅಂತಿಮಗೊಳಿಸುತ್ತದೆ. ಈ ಕುರಿತ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಇಫ್ತಿಕಾರ್ ಅಹ್ಮದ್ ಜಾವೇದ್ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದ ವಿವಿಧ ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ ಮತ್ತು ಮದರಸಾ ವಿದ್ಯಾರ್ಥಿಗಳಲ್ಲಿಯೂ ದೇಶಭಕ್ತಿಯನ್ನು ತುಂಬಲು ನಾವು ಬಯಸುತ್ತೇವೆ. ಇದರಿಂದ ಅವರು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

2017ರಲ್ಲಿ ಶಿಕ್ಷಣ ಮಂಡಳಿಯು ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಾರೋಹಣವನ್ನು ಕಡ್ಡಾಯಗೊಳಿಸಿದ ಸುಮಾರು ಐದು ವರ್ಷಗಳ ನಂತರ ಈ ನಿರ್ಧಾರ ಕೈಗೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದ್ವೇಷ, ಹಿಂಸಾಚಾರ ಹುಟ್ಟುಹಾಕುವ ಉದ್ದೇಶ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಹಿಂದಿದೆ: ಸೀತಾರಾಮ್ ಯೆಚೂರಿ

ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ: ಶಿವರಾಜ್ ತಂಗಡಗಿ

ಮಾತುಬಾರದ ಬಾಲಕನ ಹತ್ಯೆ: ಗೋಣಿ ಚೀಲದಲ್ಲಿ ತುಂಬಿ ಎಸೆದ ದುಷ್ಕರ್ಮಿಗಳು

ಸಿಮೆಂಟ್ ಲಾರಿಗಳ ನಡುವೆ ಭೀಕರ ಅಪಘಾತ: ಚಾಲಕ ಸಜೀವ ದಹನ

ಇತ್ತೀಚಿನ ಸುದ್ದಿ