ನಟಿ ನಮಿತಾ ಅವರ ಜಾತಿ ಧರ್ಮ ಕೇಳಿ ಅವಮಾನಿಸಿದ ಮಧುರೈ ಮೀನಾಕ್ಷಿ ಅಮ್ಮನವರ ದೇಗುಲದ ಸಿಬ್ಬಂದಿ!

ಮಧುರೈ: ತಮಿಳು, ಮಲಯಾಳಂ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಹಾಗೂ ಬಿಜೆಪಿ ನಾಯಕಿ ನಮಿತಾ ಅವರಿಗೆ ವಿಶ್ವವಿಖ್ಯಾತ ಮಧುರೈ ಮೀನಾಕ್ಷಿ ಅಮ್ಮನವರ ದೇಗುಲದ ಸಿಬ್ಬಂದಿ ಜಾತಿ, ಧರ್ಮ ಕೇಳಿ ಅವಮಾನಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಮಿತಾ ಅವರು ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಸಾಕಷ್ಟು ದುಡಿದಿದ್ದಾರೆ. ರಾಜಕೀಯ ಮಾತ್ರವಲ್ಲದೇ ಆಧ್ಯಾತ್ಮದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಭಾರತದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸ್ತಾ ಇರುತ್ತಾರೆ. ಆದರೆ, ಶ್ವವಿಖ್ಯಾತ ಮಧುರೈ ಮೀನಾಕ್ಷಿ ಅಮ್ಮನವರ ದೇಗುಲಕ್ಕೆ ತೆರಳಿದ ವೇಳೆ ಅವರಿಗೆ ಜಾತಿ, ಧರ್ಮ ಭೇದದ ಅನುಭವವಾಗಿದ್ದು, ಈ ಘಟನೆಯಿಂದ ಅವರು ತೀವ್ರವಾಗಿ ನೊಂದಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ನಾನು ಮತ್ತು ನನ್ನ ಪತಿ ಸೋಮವಾರ ತಾನು ಮತ್ತು ತನ್ನ ಪತಿ ಸೋಮವಾರ ಮಧುರೈ ಮೀನಾಕ್ಷಿಯಮ್ಮನ್ ದೇಗುಲಕ್ಕೆ ದರ್ಶನ ಪಡೆಯಲು ಬಂದಿದ್ದು, ಅವರನ್ನು ಮೀನಾಕ್ಷಿಯಮ್ಮನ್ ದೇವಸ್ಥಾನದ ಆಡಳಿತ ಮಂಡಳಿ ತಡೆದಿದೆ. ನೀವು ಹಿಂದೂ ಎಂಬುದಕ್ಕೆ ಪುರಾವೆ ನೀಡಿ, ಹಿಂದೂ ಧರ್ಮದಲ್ಲಿ ನಿಮ್ಮ ಜಾತಿ ಯಾವುದು ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ ಎಂದು ಅವರು ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97