ಮದುವೆ ಮೆರವಣಿಗೆಯಲ್ಲಿ ಸುಡುಮದ್ದು ಸ್ಫೋಟ: ಓರ್ವ ಸಾವು, ಇಬ್ಬರಿಗೆ ಗಾಯ - Mahanayaka

ಮದುವೆ ಮೆರವಣಿಗೆಯಲ್ಲಿ ಸುಡುಮದ್ದು ಸ್ಫೋಟ: ಓರ್ವ ಸಾವು, ಇಬ್ಬರಿಗೆ ಗಾಯ

sudumaddhu1
14/02/2022


Provided by

ತಿರುವನಂತಪುರಂ: ಸುಡುಮದ್ದು ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಭಾನುವಾರ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಜಿಷ್ಣು(28) ಮೃತ ಯುವಕ. ಭಾನುವಾರ ಮದ್ಯಾಹ್ನ 2 ಗಂಟೆ ಸುಮಾರಿಗೆ ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ನವವಿವಾಹಿತರ ಮನೆಗೆ ಮರಳುತ್ತಿದ್ದ. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಇದರಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ.

ವರದಿಗಳ ಪ್ರಕಾರ ಮದುವೆಯ ಹಿಂದಿನ ದಿನ ಸಂಗೀತ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಮದುವೆಯ ಬಳಿಕ ಮೆರವಣಿಗೆ ಸಂದರ್ಭದಲ್ಲಿ ಸುಡುಮದ್ದನ್ನು ಎಸೆಯಲಾಗಿತ್ತು. ಯಾರೋ ಎಸೆದ ಸುಡುಮದ್ದು ಆಕಸ್ಮಿಕವಾಗಿ ಜಿಷ್ಣು ತಲೆಗೆ ಬಡಿದಿದೆ. ಇದರಿಂದ ಜಿಷ್ಣು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಿಡಿಗೇಡಿಗಳಿಂದ ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಮೇಲೆ ಕಲ್ಲೆಸೆತ

ಮನೆ ಮುಂದೆ ಅಕ್ರಮ ಕಟ್ಟಡ , ಬಡ ಕುಟುಂಬಕ್ಕೆ ದಿಗ್ಬಂಧನ | ಗ್ರಾ.ಪಂ. ಸದಸ್ಯನ ದೌರ್ಜನ್ಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಪದವಿ ಪೂರ್ವ ಕಾಲೇಜುಗಳಿಗೆ ಫೆ.15ರ ವರೆಗೆ ರಜೆ ವಿಸ್ತರಣೆ

ಕೋರ್ಟ್ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್ ಅರೆಸ್ಟ್

ಇತ್ತೀಚಿನ ಸುದ್ದಿ