ಮದುವೆ ನಡೆದು ಕೆಲವೇ ಗಂಟೆಗಳಲ್ಲಿ ವರ ಸಾವು! - Mahanayaka

ಮದುವೆ ನಡೆದು ಕೆಲವೇ ಗಂಟೆಗಳಲ್ಲಿ ವರ ಸಾವು!

shivakumar
27/06/2022

ಆಂಧ್ರಪ್ರದೇಶ: ಮದುವೆ ನಡೆದು ಕೆಲವೇ ಗಂಟೆಗಳಲ್ಲಿ ನವವಿವಾಹಿತನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.


Provided by

ಜಿಲ್ಲೆಯ ವೇಲುಗೋಡು ವಲಯದ ಬೋಯರೇವುಳ ಗ್ರಾಮದ ನಿವಾಸಿಯಾದ ಶಿವಕುಮಾರ್ ಶುಕ್ರವಾರ ಜೂಪಾಡುಬಂಗ್ಲಾ ವಲಯದ ಭಾಸ್ಕರಪುರ ಗ್ರಾಮದ ಯುವತಿಯನ್ನು ಮದುವೆಯಾಗಿದ್ದರು.

ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಾಕಿಂಗ್​ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವ, ಸುಮಾರು ಸಮಯವಾದರೂ ಮನೆಗೆ ಮರಳಿ ಬಂದಿಲ್ಲ. ಹೀಗಾಗಿ ಕುಟುಂಬಸ್ಥರು ಶಿವಕುಮಾರ್‌ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಬೋಯರೇವುಳ ಮತ್ತು ಮೋತ್ಕೂರು ಗ್ರಾಮಗಳ ನಡುವಿನ ರಸ್ತೆಯಲ್ಲಿ ಶಿವಕುಮಾರ್ ಬಿದ್ದಿರುವುದು ಗೊತ್ತಾಗಿದೆ.

ಆಗ ಕೂಡಲೇ ಅವರನ್ನು ಆತ್ಮಕೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಶಿವಕುಮಾರ್​ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಕುಟುಂಬಸ್ಥರ ದೂರಿನ ಮೇರೆಗೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಅಪರಿಚಿತ ವಾಹನವೇನಾದರೂ ಡಿಕ್ಕಿಯಾಗಿದೆಯೇ? ಅಥವಾ ಯಾರಾದರೂ ಕೊಲೆ ಮಾಡಿದ್ದಾರಾ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಈ ಸಾವು ಸಂಭವಿಸಿದ್ದರಿಂದ ಇಡೀ ಮನೆ ಮತ್ತು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ: ಮದ್ರಸ ಶಿ‍ಕ್ಷಕ ಅರೆಸ್ಟ್

ಫ್ಯಾಶನ್ ಬ್ಲಾಗರ್ ಳನ್ನು ಕೈಕಾಲು ಕಟ್ಟಿ ಕಟ್ಟಡದಿಂದ ಕೆಳಗೆಸೆದ ಪತಿ!

ನಡು ರಸ್ತೆಯಲ್ಲಿ ವಿದ್ಯಾರ್ಥಿನಿಯ ಶಿರಚ್ಛೇದಿಸಿದ ಪಾಗಲ್ ಪ್ರೇಮಿ: ಮದುವೆಗೆ ಒಪ್ಪದಿದ್ದರೆ ಕೊಲ್ಲುವುದೇ?

ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಡಿಕ್ಕಿ ಹೊಡೆದ ಹಕ್ಕಿ!

ನಾಲೆಗೆ ಉರುಳಿದ ಕ್ರೂಸರ್ ವಾಹನ: 8 ಮಂದಿ ಸ್ಥಳದಲ್ಲೇ ಸಾವು

 

ಇತ್ತೀಚಿನ ಸುದ್ದಿ