ಮದುವೆಗೆ ಒಪ್ಪದ ಹೆತ್ತವರನ್ನೇ ಹತ್ಯೆಗೈದ ಅಪ್ರಾಪ್ತ ಮಗಳು - Mahanayaka

ಮದುವೆಗೆ ಒಪ್ಪದ ಹೆತ್ತವರನ್ನೇ ಹತ್ಯೆಗೈದ ಅಪ್ರಾಪ್ತ ಮಗಳು

crime 1
16/03/2022

ಲಕ್ನೋ: ಮದುವೆಗೆ ಹೆತ್ತವರು ಒಪ್ಪಿಗೆ ನೀಡಿಲ್ಲವೆಂದು ಅಪ್ರಾಪ್ತ ಮಗಳೊಬ್ಬಳು ಪ್ರಿಯಕರನ ಜೊತೆಗೂಡಿ ಹೆತ್ತವರನ್ನೇ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬಿಜನೋರ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.


Provided by

17 ವರ್ಷದ ಹುಡುಗಿ 20 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಹೆತ್ತವರು ಒಪ್ಪಿಗೆ ನೀಡಿಲ್ಲ. ಇದರಿಂದ ಕೋಪಗೊಂಡ ಇವರು ಹೆತ್ತವರನ್ನೇ ಕೊಲೆ ಮಾಡಿದ್ದಾರೆ. ಮಾ. 6ರಂದು ಹುಡುಗಿ ತಂದೆ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ನಂತರ ಕೆಲವು ದಿನಗಳ ನಂತರ ಆಕೆ ತಾಯಿ ಮೃತದೇಹ ಪತ್ತೆಯಾಗಿದೆ. ಆದರೆ ಕೊಲೆ ವಿಚಾರವಾಗಿ ಹುಡಗಿ ಕಥೆ ಕಟ್ಟಿ ನಂಬಿಸುವ ಪ್ರಯತ್ನ ಮಾಡಿದ್ದಾಳೆ.

ದಂಪತಿ ಕೊಲೆಯಾಗಿರುವ ಬಗ್ಗೆ ಅನುಮಾನಗೊಂಡು ತನಿಖೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ. ತನಿಖೆ ವೇಳೆ ಹುಡುಗಿ ತಾನೇ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹುಡುಗಿ ಅಪ್ರಾಪ್ತೆ ಆಗಿರುವುದರಿಂದ ಬಾಲಾರೋಪಿ ಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿದ್ದು ರಾಜೀನಾಮೆ

ಚೀನಾದ ಬೆನ್ನಲ್ಲೇ ದಕ್ಷಿಣ ಕೊರಿಯಾದಲ್ಲಿ  ಕೊರೊನಾ  ಭೀತಿ

ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಥಿಯೇಟರ್​​ ನಲ್ಲಿ ನಾಳೆ ಜೇಮ್ಸ್​ ರಿಲೀಸ್​​

ಉಕ್ರೇನ್‌ ನ ಮಾರಿಯುಪೋಲ್ ಆಸ್ಪತ್ರೆಯನ್ನು ವಶಕ್ಕೆ ಪಡೆದ ರಷ್ಯಾ ಸೇನೆ

ನಾಳೆ ಕರ್ನಾಟಕ ಬಂದ್‌ ಗೆ ಮುಸ್ಲಿಂ ಸಂಘಟನೆ ಕರೆ

 

ಇತ್ತೀಚಿನ ಸುದ್ದಿ