ಮದುವೆ ಮುಗಿಸಿ ಬರುತ್ತಿದ್ದವರು ನೀರು ಪಾಲು: ರಕ್ಷಣೆಗೆ ಮುಂದಾಗದೇ ನೋಡುತ್ತಾ ನಿಂತ ಜನರು

ನಾಗ್ಪುರ: ಮದುವೆ ಸಮಾರಂಭ ಮುಗಿಸಿ ವಾಪಸ್ಸಾಗುತ್ತಿದ್ದ ಸ್ಕಾರ್ಪಿಯೋ ವಾಹನದಲ್ಲಿದ್ದವರು ಪ್ರವಾಹದಲ್ಲಿ ಕೊಚ್ಚಿ ಹೋದ ಅಘಾತಕಾರಿ ಘಟನೆ ನಾಗ್ಪುರ ಜಿಲ್ಲೆಯ ಕೆಲ್ವಾಡ್ ನ ನಂದಗೌಮುಖ-ಛತ್ರಪುರ ರಸ್ತೆಯ ಬ್ರಹ್ಮನ್ಮರಿ ನುಲ್ಲಾದಲ್ಲಿ ನಡೆದಿದೆ.
ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಯನ್ನು ವೀಕ್ಷಿಸಲು ಅನೇಕ ಜನರು ದಡದಲ್ಲಿ ಜಮಾಯಿಸಿದರು, ಆದರೆ ಯಾರೂ ಅವರನ್ನು ರಕ್ಷಿಸಲು ಸಿದ್ಧರಿರಲಿಲ್ಲ.
ಬದಿಯಲ್ಲಿ ತಡೆ ಗೋಡೆ ಇಲ್ಲದ ಸೇತುವೆಯನ್ನು ದಾಟಲೆತ್ನಿಸಿದ ವೇಳೆ ನೀರಿನ ರಭಸಕ್ಕೆ ವಾಹನ ಕೊಚ್ಚಿಹೋಗಿದೆ. ಕಾರಿನಲ್ಲಿ ಎಂಟು ಜನ ಪ್ರಯಾಣಿಸುತ್ತಿದ್ದು ಇಬ್ಬರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ.13 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಅಪಘಾತಕ್ಕೀಡಾದ ವಾಹನದಲ್ಲಿದ್ದ ಪ್ರಯಾಣಿಕರನ್ನು ರೋಶ್ನಿ ಚೌಕಿಕರ್ (35), ಅವರ ಪುತ್ರ ದಾದು (13), ನೀಮು ಅತ್ನೆರೆ (45), ಮಧುಕರ್ ಪಾಟೀಲ್ (60) ಮತ್ತು ಅವರ ಪತ್ನಿ ನಿರ್ಮಲಾ (55) ಎಂದು ಗುರುತಿಸಲಾಗಿದೆ. ವಾಹನದ ಚಾಲಕ ವಿಕಾಸ್ ದಿವ್ಟೆ (35) ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದ್ದು, ಜಲಾವೃತ ಕಾರಿನ ಕಿಟಕಿಯಿಂದ ಕೈ ಹೊರಹಾಕಿ ಕಾರಿನ ಮೇಲ್ಭಾಗವನ್ನು ಹಿಡಿದಿರುವುದು, ರಕ್ಷಣೆ ಮರೆತು ನೂರಾರು ಮಂದಿ ನದಿದಂಡೆಯಲ್ಲಿ ನಿಂತು ಈ ದೃಶ್ಯವನ್ನು ನೋಡುತ್ತಿರುವುದು ದೃಶ್ಯದಲ್ಲಿದೆ.
ನಾಗ್ಪುರದಲ್ಲಿ ಮದುವೆಯಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಇದುವರೆಗೆ 83 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಹಲವೆಡೆ ಇನ್ನೂ ಭಾರೀ ಮಳೆಯಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka