4 ಕೋಟಿಯ ಚಿನ್ನಾಭರಣ ಕಳವು: ಮಗಳ ವಿರುದ್ಧವೇ ದೂರು ನೀಡಿದ ತಾಯಿ! - Mahanayaka
2:13 AM Wednesday 15 - October 2025

4 ಕೋಟಿಯ ಚಿನ್ನಾಭರಣ ಕಳವು: ಮಗಳ ವಿರುದ್ಧವೇ ದೂರು ನೀಡಿದ ತಾಯಿ!

tejavanti
13/11/2021

ಬೆಂಗಳೂರು: ಮಗಳು ಸುಮಾರು 4 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ತಾಯಿಯೇ ತನ್ನ ಮಗಳ ಮೇಲೆ ಪೊಲೀಸರಿಗೆ ದೂರು ನೀಡಿರುವ ಅಚ್ಚರಿಯ ಘಟನೆಯೊಂದು ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


Provided by

7.5 ಕೆ.ಜಿ. ಚಿನ್ನ, ವಜ್ರದ ಆಭರಣಗಳನ್ನು ತನ್ನ ಮಗಳು ತೇಜವಂತಿ ಕದ್ದು ಪರಾರಿಯಾಗಿದ್ದಾಳೆ ಎಂದು ತಾಯಿ ವಿಜಯ ಲಕ್ಷ್ಮೀ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ತಾಯಿ ವಿಜಯಲಕ್ಷ್ಮೀ ಅನಾರೋಗ್ಯದಿಂದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಈ ವೇಳೆ ಚಿನ್ನ ಮತ್ತು ವಜ್ರದ ಆಭರಣಗಳನ್ನು ಮಗಳ ಕೈಗೆ ನೀಡಿ ಮನೆಯಲ್ಲಿ ಭದ್ರವಾಗಿಡು ಎಂದು ಹೇಳಿದ್ದರಂತೆ. ಆದರೆ, ಆಸ್ಪತ್ರೆಯಿಂದ ವಾಪಸ್ ಬಂದು ನೋಡಿದಾಗ, ಚಿನ್ನಾಭರಣ ಚಿನ್ನಾಭರಣಗಳು ಮನೆಯಲ್ಲಿ ಎಲ್ಲಿಯೂ ಕಾಣಿಸಲಿಲ್ಲ ಎನ್ನಲಾಗಿದೆ.

“ಆಭರಣಗಳನ್ನು ಎಲ್ಲಿ ಇಟ್ಟಿದ್ದಿಯಾ?” ಎಂದು ಹೇಳಲು ಮಗಳಿಗೆ ಕರೆ ಮಾಡಿದರೆ, ಮಗಳ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ಬೆದರಿದ ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯ ಪುತ್ರಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಇನ್ನೂ 10 ಮಂದಿಗೆ ದೃಷ್ಟಿ ನೀಡಲಿದೆ ಪುನೀತ್ ರಾಜ್ ಕುಮಾರ್ ಕಣ್ಣುಗಳು!

ಕಡಬ: ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಬೆಳೆ ಧ್ವಂಸಗೊಳಿಸಿದ ಕಾಡಾನೆ

ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ ಎಂದು ಸ್ಟೇಟಸ್ ಹಾಕಿ ಕಾಂಗ್ರೆಸ್ ಸದಸ್ಯೆ ಆತ್ಮಹತ್ಯೆಗೆ ಯತ್ನ!

ಪ್ಲೈಓವರ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಹಾಲಿನ ವಾಹನ ಡಿಕ್ಕಿ: ಇಬ್ಬರು ಯುವಕರ ದಾರುಣ ಸಾವು

ಬೀದಿ ಬದಿ ಮಲಗಿದ್ದ ಭಿಕ್ಷುಕಿಯ ಮೇಲೆ ಅತ್ಯಾಚಾರ, ಭೀಕರ ಕೊಲೆ

ಆಟೋ ಚಾಲಕನನ್ನು ಶೌಚಾಲಯಕ್ಕೆ ಎಳೆದೊಯ್ದು ವಿವಸ್ತ್ರಗೊಳಿಸಿ ವೈದ್ಯರ ತಂಡದಿಂದ ಹೇಯ ಕೃತ್ಯ!

ಲಖಿಂಪುರ ಖೇರಿ ಹಿಂಸಾಚಾರ ಬಿಜೆಪಿಗೆ ಹಾನಿಯುಂಟು ಮಾಡಬಹುದು | ಸಮೀಕ್ಷೆ

ಇತ್ತೀಚಿನ ಸುದ್ದಿ