ಮಗಳ ಬೆನ್ನಲ್ಲಿ ಅಡ್ರೆಸ್ ಬರೆದ ಮಹಿಳೆ: ಉಕ್ರೇನ್ ನಲ್ಲೊಂದು ಮನಕಲಕುವ ಘಟನೆ - Mahanayaka
10:09 PM Tuesday 14 - October 2025

ಮಗಳ ಬೆನ್ನಲ್ಲಿ ಅಡ್ರೆಸ್ ಬರೆದ ಮಹಿಳೆ: ಉಕ್ರೇನ್ ನಲ್ಲೊಂದು ಮನಕಲಕುವ ಘಟನೆ

ukraine
05/04/2022

ಕೀವ್:  ಉಕ್ರೇನ್ ನಲ್ಲಿ ರಷ್ಯಾ ಪಡೆ ಜನರ ಮಾರಣಹೋಮವನ್ನು ಮುಂದುವರಿಸಿದೆ. ರಷ್ಯಾದ ಕ್ರೂರತನಕ್ಕೆ ಉಕ್ರೇನ್ ನಲುಗಿದ್ದು, ಉಕ್ರೇನ್ ನ ಪ್ರಜೆಗಳು ಇದೀಗ ತಮ್ಮ ಸಾವನ್ನು ಎದುರು ನೋಡುತ್ತಿದ್ದಾರೆ.


Provided by

ಇದೀಗ ಉಕ್ರೇನ್ ನ ಮಹಿಳೆಯೊಬ್ಬರು ಮಾಡಿರುವ ಟ್ವೀಟ್ ಎಂತಹ ಕಠೋರ ಮನಸ್ಸಿನವರ ಹೃದಯವನ್ನೂ ಕರಗಿಸುವಂತಿದೆ. ಮಹಿಳೆಯೊಬ್ಬರು ತನ್ನ ಹೆಣ್ಣು ಮಗುವಿನ ಬೆನ್ನಲ್ಲಿ ತನ್ನ ವಿಳಾಸವನ್ನು ಬರೆದು ಫೋಟೋವನ್ನು ಟ್ವೀಟ್ ಮಾಡಿದ್ದು, ತನ್ನ ಟ್ವೀಟ್ ನಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಮಗುವಿನ ಬೆನ್ನಲ್ಲೇ ವಿಳಾಸ ಬರೆದಿರುವ ತಾಯಿ, ತನಗೇನಾದರೂ ಸಂಭವಿಸಿದರೆ, ತನ್ನ ಮಗಳನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮಗುವಿನ ಬೆನ್ನಲ್ಲಿ ತನ್ನ ಅಡ್ರೆಸ್ ಹಾಗೂ ಫೋನ್ ಸಂಖ್ಯೆಯನ್ನು ಕೂಡ ಬರೆದಿದ್ದಾರೆ.

ಈ ಟ್ವೀಟ್ ಉಕ್ರೇನ್ ನಲ್ಲಿನ ಭೀಕರತೆಯನ್ನು ತೋರ್ಪಡಿಸಿದೆ. ರಷ್ಯಾದ ಸೈನಿಕರ ಕ್ರೂರತೆಯನ್ನು ಕೂಡ ತೋರ್ಪಡಿಸಿದೆ. ಈ ಚಿತ್ರವನ್ನು ಉಕ್ರೇನ್ ನ ಪತ್ರಕರ್ತರು ಹಂಚಿಕೊಂಡಿದ್ದು, ಇದು ಯುದ್ಧದ ನೈಜ ಸ್ಥಿತಿಯನ್ನು ತೋರ್ಪಡಿಸುತ್ತಿದೆ. ಘಟನೆ ಹೃದಯ ವಿದ್ರಾವಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪುಟ್ಟ ತಂಗಿಯನ್ನು ಮಡಿಲಲ್ಲಿಟ್ಟುಕೊಂಡು ಶಾಲೆಗೆ ಹಾಜರಾಗುತ್ತಿರುವ ಅಕ್ಕ!

ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆ

ರಾಜ್ಯದಲ್ಲಿ ಬಜರಂಗದಳದವರು ಸಿಎಂ ಆಗಿದ್ದಾರೆ ಅಂತ ಅನ್ನಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ ನುಡಿ

ಸಣ್ಣ ವಯಸ್ಸಲ್ಲೇ ಪ್ರೀತಿಸಿದರು, ಮದುವೆಯೂ ಆಯ್ತು, ಆದರೆ ಪ್ರಕೃತಿ ಆಟಕ್ಕೆ ದುರಂತವೇ ನಡೆದು ಹೋಯ್ತು!

ರಾಹುಲ್​ ಗಾಂಧಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದುಕೊಟ್ಟ 78ರ ವೃದ್ಧೆ!

 

 

ಇತ್ತೀಚಿನ ಸುದ್ದಿ