ನನ್ನ ಮಗನ ಬಗ್ಗೆ ಇಲ್ಲ ಸಲ್ಲದ್ದು ಮಾತನಾಡಬೇಡಿ: ಟ್ರೋಲಿಗರಿಗೆ ಕೈಮುಗಿದು ಬೇಡಿದ ನವೀನ್ ತಾಯಿ - Mahanayaka

ನನ್ನ ಮಗನ ಬಗ್ಗೆ ಇಲ್ಲ ಸಲ್ಲದ್ದು ಮಾತನಾಡಬೇಡಿ: ಟ್ರೋಲಿಗರಿಗೆ ಕೈಮುಗಿದು ಬೇಡಿದ ನವೀನ್ ತಾಯಿ

naveen
10/03/2022


Provided by

ಹಾವೇರಿ: ಉಕ್ರೇನ್ ನಲ್ಲಿ ಬಾಂಬ್ ದಾಳಿಗೆ ಬಲಿಯಾದ ಮೆಡಿಕಲ್ ವಿದ್ಯಾರ್ಥಿ ನವೀನ್ ತಾಯಿ ತಮ್ಮ ಮಗನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ನಡೆಸುತ್ತಿರುವ ಟ್ರೋಲ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಈ ರೀತಿಯಾಗಿ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಟ್ರೋಲ್ ಪೇಜ್ ಗಳಲ್ಲಿ ನವೀನ್ ಯಾಕೆ ಹೊರಗಡೆ ಹೋಗಿದ್ದ ಎಂದೆಲ್ಲ, ಆತನನ್ನೇ ತಪ್ಪಿ ಹಿಡಿಯುವಂತಹ ದುರುದ್ದೇಶಪೂರಿತ ಟ್ರೋಲ್ ಗಳು ಹರಿದಾಡುತ್ತಿದ್ದು, ಈ ಸಂಬಂಧ ನವೀನ್ ತಾಯಿ ಹಾಗೂ ಸ್ನೇಹಿತರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ನವೀನ್ ತನ್ನ ಹೊಟ್ಟೆ ತುಂಬಿಸಲು ಹೊರಗೆ ಹೋಗಿರಲಿಲ್ಲ, ರೂಮ್ ನಲ್ಲಿ ತನ್ನ ಸ್ನೇಹಿತರು ಹಸಿವಿನಿಂದ ಒದ್ದಾಡುತ್ತಿರುವುದನ್ನು ಕಂಡು ಸಹಿಸಲು ಸಾಧ್ಯವಾಗದೇ ಹೋಗಿದ್ದ ಎಂದು ಹೇಳಿದ್ದಾರೆ.

ಮೃತ ನವೀನ್ ನಿವಾಸಕ್ಕೆ ಉಕ್ರೇನ್​ನಿಂದ ಹಿಂದಿರುಗಿದ ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಈ ವೇಳೆ ತನ್ನ ಮಗನ ಬಗ್ಗೆ ಈ ರೀತಿಯ ಟ್ರೋಲ್ ಗಳು ಬರುತ್ತಿದೆ. ಅವನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಬೇಡಿ ಎಂದು ಟ್ರೋಲಿಗರಿಗೆ ಅವರು ಕೈಮುಗಿದು ಕೇಳಿಕೊಂಡಿದ್ದಾರೆ. ಜೊತೆಗೆ ನವೀನ್ ಮೃತದೇಹವನ್ನು ಭಾರತಕ್ಕೆ ತರಿಸಲು ವ್ಯವಸ್ಥೆ ಮಾಡಬೇಕು ಎಂದು ಕೋರಿದರು.

ನನ್ನ ಮಗ ಯಾವತ್ತೂ ಊಟಕ್ಕಾಗಿ ಆಸೆ ಪಟ್ಟವನಲ್ಲ. ಬಂದವರೆಲ್ಲ ಊಟ ಯಾಕೆ ತರುವುದಕ್ಕೆ ಹೋದ ಅಂತಾ ಕೇಳುತ್ತಾರೆ. ಆತನ​​​ ಸ್ನೇಹಿತರು ಮಲಗಿದ್ದರು. ಅವರಿಗೆ ಊಟ ತರಲು ನವೀನ್​ ಹೊರಗೆ ಹೋಗಿದ್ದ. ನನ್ನ ಮಗ ಬಡವರ ಧ್ವನಿಯಾಗಿದ್ದ. ದಯಮಾಡಿ ಯಾರೂ ನವೀನ್​​​ ಯಾಕೆ ಹೊರಗೆ ಹೋಗಿದ್ದ ಎಂದು ಕೇಳಬೇಡಿ ಎಂದು ನವೀನ್​​ ತಾಯಿ ವಿಜಯಲಕ್ಷ್ಮೀ ಕೈ ಮುಗಿದು ಬೇಡಿಕೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿಶ್ವ ಯುದ್ಧದ ನಂತರ ಮೊದಲನೆ ಬಾರಿಗೆ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

ರಷ್ಯಾ ದಾಳಿ: ಕುಡಿಯಲು ನೀರು ಸಿಗದೆ ಜೀವ ಬಿಟ್ಟ ಅನಾಥ ಬಾಲಕಿ

ರಷ್ಯಾದಲ್ಲಿ ಮೆಕ್‌ ಡೊನಲ್ಡ್‌, ಪೆಪ್ಸಿ, ಕೊಕಾ-ಕೊಲಾ ಕಂಪೆನಿಗಳಿಂದ ವಹಿವಾಟು ಸ್ಥಗಿತ

ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾಗಿ ಪಿ.ಜಿ.ದೀಪಾಮೋಲ್

ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕು: ಮಮತಾ ಬ್ಯಾನರ್ಜಿ

ಇತ್ತೀಚಿನ ಸುದ್ದಿ