ಮಗನ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದ ತಾಯಿ ಸಾವು! - Mahanayaka
10:51 PM Thursday 21 - August 2025

ಮಗನ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದ ತಾಯಿ ಸಾವು!

ashwin and mother
12/04/2021


Provided by

ಪಾಟ್ನಾ: ಕಳವು ಮಾಡಿದ ಬೈಕ್ ವಶಪಡಿಸಿಕೊಳ್ಳಲು ಹೋಗಿದ್ದ ಪೊಲೀಸ್ ಅಧಿಕಾರಿ ಅಶ್ವಿನ್ ಕುಮಾರ್ ಅವರನ್ನು ಸ್ಥಳೀಯ ಗುಂಪೊಂದು ಹತ್ಯೆ ಮಾಡಿರುವ ಬೆನ್ನಲ್ಲೆ ಅವರ ತಾಯಿ ಕೂಡ ಸಾವನ್ನಪ್ಪಿದ್ದು, ಮಗನ ಸಾವಿನ ಸುದ್ದಿ ಕೇಳಿದ ಆಘಾತದಿಂದ ಅವರು ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಿಹಾರದ ಪೊಲೀಸ್ ಅಧಿಕಾರಿಯಾಗಿರುವ 52 ವರ್ಷ ವಯಸ್ಸಿನ  ಅಶ್ವಿನ್ ಅವರು, ಪಶ್ಚಿಮ ಬಂಗಾಳದ ಗ್ರಾಮವೊಂದಕ್ಕೆ ಬೈಕ್ ಕಳ್ಳರನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಇವರಿಗೆ ನೆರವು ನೀಡಲಿಲ್ಲ. ಆದರೆ ಧೈರ್ಯವಂತ ಅಧಿಕಾರಿಯಾಗಿದ್ದ ಅಶ್ವಿನ್ ಏಕಾಂಗಿಯಾಗಿ ತೆರಳಿದ್ದರು. ಈ ವೇಳೆ ಸ್ಥಳೀಯ ಗುಂಪೊಂದು ಅಶ್ವಿನ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದೆ.

ಅಶ್ವಿನ್ ಸಾವಿನ ಸುದ್ದಿಯನ್ನು ಮೊದಲು ತಾಯಿಗೆ ತಿಳಿಸಿರಲಿಲ್ಲ. ಆದರೆ ಶನಿವಾರ ಮಗನ ಮೃತದೇಹ ಮನೆಗೆ ಬಂದಾಗ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು.  ಬಳಿಕ ಬೆಳಗ್ಗಿನ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ಅಶ್ವಿನ್ ಸಂಬಂಧಿ ಸುಭಾಸ್ ಸಿಂಗ್ ಹೇಳಿದ್ದಾರೆ.

ಇನ್ನೂ ಬಿಹಾರದ ಪುರ್ನಿಯಾ ಸಮೀಪದ ಪಂಚು ಮಂಡಲ್ ತೋಲಾ ಗ್ರಾಮದ ಹೊರವಲಯದಲ್ಲಿ ತಾಯಿ ಮಗನ ಅಂತ್ಯ ಸಂಸ್ಕಾರ ಜೊತೆಯಾಗಿಯೇ ನೆರವೇರಿಸಲಾಗಿದೆ. ಪಶ್ಚಿಮ ಬಂಗಾಳ ಪೊಲೀಸರ ನಿರ್ಲಕ್ಷ್ಯದಿಂದಾಗಿ ಹಿರಿಯ ಪೊಲೀಸ್ ಅಧಿಕಾರಿ ಮಾತ್ರವಲ್ಲದೇ ಅವರ ತಾಯಿ ಕೂಡ ಮೃತಪಟ್ಟರು ಎಂದು ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ