ಸ್ವಂತ ಮಗನನ್ನು ಅಪಹರಿಸಿ ತಂದೆಯಿಂದ ಘೋರ ಕೃತ್ಯ! - Mahanayaka
6:24 PM Wednesday 17 - September 2025

ಸ್ವಂತ ಮಗನನ್ನು ಅಪಹರಿಸಿ ತಂದೆಯಿಂದ ಘೋರ ಕೃತ್ಯ!

03/02/2021

ರಾಯಚೂರು: ತಂದೆಯೋರ್ವ ತನ್ನ ಸ್ವಂತ ಮಗನನ್ನೇ ಅಪಹರಿಸಿ ಕತ್ತು ಹಿಸುಕಿ ಕೊಲೆ ಗೈದಿರುವ ಘಟನೆ ಸಿಂಧನೂರು ತಾಲೂಕಿನ ಕಲ್ಮಂಗಿಯಲ್ಲಿ ನಡೆದಿದೆ.


Provided by

4 ವರ್ಷದ ಬಾಲಕ ಮಹೇಶ್ ಕೊಲೆಯಾದ ಬಾಲಕನಾಗಿದ್ದಾನೆ. ಆರೋಪಿ ಯಲ್ಲಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯಲ್ಲಪ್ಪನ ಪತ್ನಿ ತವರಿಗೆ ಹೋಗಿದ್ದಳು. ಇದೇ ಸಂದರ್ಭದಲ್ಲಿ ಯಲ್ಲಪ್ಪ ಕೂಡ ಪತ್ನಿಯ ಮನೆಗೆ ತೆರಳಿದ್ದು, ಮಗನನ್ನು ಅಲ್ಲಿಂದ ಹೇಗೋ ಅಪಹರಿಸಿದ್ದಾನೆನ್ನಲಾಗಿದೆ.

ಮಗನನ್ನು ಅಪಹರಿಸಿದ ಯಲ್ಲಪ್ಪ ನಿನ್ನೆ ರಾತ್ರಿ ನಿರ್ದಯವಾಗಿ ಮಗನ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಮಗುವಿನ ಶವವನ್ನು ಜಮೀನೊಂದರಲ್ಲಿ ಎಸೆದಿದ್ದಾನೆ.

ಇತ್ತ ಮಗು ಅಪಗರಣವಾಗಿದೆ ಎಂದು ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ತಂದೆ ಯಲ್ಲಪ್ಪನ ಕೃತ್ಯದ ಸುಳಿವು ಲಭ್ಯವಾಗಿದೆ. ತಕ್ಷಣವೇ ಆತನನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ