ಮಗು ಜನಿಸಿದ ಬಳಿಕ ದೂರವಾದ ಪ್ರೇಮಿಗಳು! | ಹೆತ್ತವರ ನಿರ್ಲಕ್ಷ್ಯದಿಂದ ಟ್ರಸ್ಟ್ ಮಡಿಲು ಸೇರಿದ ಮಗು - Mahanayaka

ಮಗು ಜನಿಸಿದ ಬಳಿಕ ದೂರವಾದ ಪ್ರೇಮಿಗಳು! | ಹೆತ್ತವರ ನಿರ್ಲಕ್ಷ್ಯದಿಂದ ಟ್ರಸ್ಟ್ ಮಡಿಲು ಸೇರಿದ ಮಗು

kollegala
04/06/2021


Provided by

ಕೊಳ್ಳೇಗಾಲ:  21 ವರ್ಷ ವಯಸ್ಸಿನ ಯುವಕ-ಯುವತಿಗೆ ಕಾಲೇಜಿನಲ್ಲಿಯೇ ಪ್ರೀತಿ ಹುಟ್ಟಿದ್ದು, ಪರಸ್ಪರ ಪ್ರೀತಿಸಿದ ಬಳಿಕ ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿದ್ದ ಅವರಿಗೆ ಮಗು ಕೂಡ ಜನಿಸಿದೆ. ಆದರೆ ಮಗು ಜನಿಸಿದ ತಕ್ಷಣವೇ ಇಬ್ಬರೂ ತಮ್ಮ ಸಂಬಂಧವನ್ನೇ ಮುರಿದುಕೊಂಡು ತಮಗೆ ಮಗು ಬೇಡಎಂದು ನಿರಾಕರಿಸಿದ್ದು, ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಗು ಕೊಳ್ಳೇಗಾಲದ ಟ್ರಸ್ಟ್ ವೊಂದರ ಆಶ್ರಯ ಪಡೆದಿದೆ.

ಮೈಸೂರು ನಗರದಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ವರದಿಯಾಗಿದ್ದು,  ಮಗು ಹುಟ್ಟಿದ 11 ದಿನಗಳಲ್ಲಿಯೇ ಕಾರಣಾಂತರಗಳಿಂದ ತಂದೆ-ತಾಯಿಗಳಿಬ್ಬರಿಗೂ ಬೇಡವಾಗಿದೆ. ತಂದೆ ತಾಯಿಯ ನಡುವೆ ನಡೆದ ಜಗಳವೇ, ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಪ್ರಕರಣ ದಾಖಲಾದ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಇಲಾಖೆಗೆ ಈ ವಿಚಾರ ತಿಳಿದು ಬಂದಿದ್ದು, ಇಬ್ಬರನ್ನೂ ಕರೆಸಿ, ಅವರು ಮಾತನಾಡಿಸಿದ್ದಾರೆ.

ಕಾನೂನಿನ ಪ್ರಕಾರ ಇಬ್ಬರಿಗೂ ಮದುವೆಯಾಗಲು ನಿರ್ಧಾರ ತೆಗೆದುಕೊಳ್ಳುವ ನಿರ್ಧಾರವಿದೆ. ಇಬ್ಬರೂ ಮದುವೆಯಾಗಬಹುದಲ್ಲವೇ? ಎಂದು ಪ್ರಶ್ನಿಸಿದ ವೇಳೆ, ಇಬ್ಬರ ಮನೆಯಲ್ಲಿಯೂ ಈ ಮದುವೆಗೆ ಒಪ್ಪಿಗೆ ಇಲ್ಲ ಎಂದು ಕಾರಣ ಹೇಳಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಮಗುವನ್ನು ಕೊಳ್ಳೇಗಾಲದ ಜೀವನ ಜ್ಯೋತಿ ಟ್ರಸ್ಟ್ ನ ಆಶ್ರಯಕ್ಕೆ ನೀಡಲಾಗಿದೆ. ಮಗುವನ್ನು ವಾಪಸ್ ಪಡೆದುಕೊಳ್ಳಲು 60 ದಿನಗಳ ಕಾಲ ಪೋಷಕರಿಗೆ ಕಾಲಾವಕಾಶವನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ