ಮಗು ಕಳವು ಪ್ರಕರಣ: ವಾಣಿ ವಿಲಾಸ್ ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ - Mahanayaka
10:45 AM Saturday 23 - August 2025

ಮಗು ಕಳವು ಪ್ರಕರಣ: ವಾಣಿ ವಿಲಾಸ್ ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ

23/11/2020


Provided by

ಬೆಂಗಳೂರು: ಎರಡು ದಿನದ ಮಗುವನ್ನು ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಣಿ ವಿಲಾಸ್ ಆಸ್ಪತ್ರೆಯ ಭದ್ರತಾ ಲೋಪದ ವಿರುದ್ಧ  ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ 12 ಸಿಸಿಟಿವಿಗಳಿವೆ. ಇದರಲ್ಲಿ 10 ಕಾರ್ಯ ನಿರ್ವಹಿಸುತ್ತಿಲ್ಲ, ಮಗು ನಾಪತ್ತೆಯಾದ ಸಂದರ್ಭದಲ್ಲಿ ಯಾರೆಲ್ಲ ಇದ್ದರು? ಮಗುವನ್ನು ಬಂದು ಕೇಳಿದಾಗ ಯಾವುದೇ ಮಾಹಿತಿ ಪಡೆಯದೇ ಹೇಗೆ ಅವರ ಕೈಗೆ ನೀಡಿದ್ದೀರಿ ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟಿಸ್ ನೀಡಲಾಗಿದೆ.

ಈ ಹಿಂದೆ ಕೂಡ ವಾಣಿ ವಿಲಾಸ್ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಉತ್ತರ ನೀಡುವಂತೆ ಆಸ್ಪತ್ರೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈ ವೇಳೆ, ಮೆಟ್ರೋ ಕಾಮಗಾರಿ ಹಿನ್ನೆಲೆ ಸಿಸಿಟಿವಿ ಕೆಲಸ ಮಾಡುತ್ತಿಲ್ಲ. ಚಿಕ್ಕ ಸಮಸ್ಯೆಗಳಿವೆ ಇವುಗಳನ್ನೆಲ್ಲ ಬಗೆಹರಿಸುವುದಾಗಿ ಉತ್ತರ ನೀಡಿದ್ದರು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ