ತನ್ನ ಹದಿಹರೆಯದ ಮಗುವನ್ನೇ ವಿವಾಹವಾಗಲು ಕೋರಿ ಕೋರ್ಟ್ ಗೆ ಅರ್ಜಿ
13/04/2021
ನ್ಯೂಯಾರ್ಕ್: ತನ್ನ ಹದಿಹರೆಯದ ಮಗುವನ್ನೇ ಮದುವೆಯಾಗಲು ಕೋರಿ ಪೋಷಕರೊಬ್ಬರು ಕೋರ್ಟ್ ಮೆಟ್ಟಿಲೇರಿದ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದ್ದು, ರಕ್ತ ಸಂಬಂಧ ಎಂಬ ಬಂಧವನ್ನು ಮೀರಿದ ಭಾವನೆಗಳಿಗೆ ಕೋರ್ಟ್ ಸಮ್ಮತಿ ನೀಡುವುದೇ ಎನ್ನುವ ಕುತೂಹಲ ಇದೀಗ ಸಾರ್ವಜನಿಕವಾಗಿ ಮೂಡಿದೆ.
ಅರ್ಜಿದಾರರು ಯಾರು ಎನ್ನುವುದನ್ನು ಗೌಪ್ಯವಾಗಿಡಲಾಗಿದೆ. ತನ್ನದೇ ರಕ್ತ ಬಂಧುವನ್ನು ತಾನು ವರಿಸಬೇಕು. ಅದಕ್ಕೆ ಕೋರ್ಟ್ ಅನುಮತಿ ನೀಡಬೇಕು ಎಂದು ಕೋರಿ ಮ್ಯಾನ್ ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಈ ಪ್ರಕರಣದ ವರದಿಯು ಬಹಳ ವಿಚಿತ್ರವಾಗಿ ಕಂಡು ಬಂದಿದೆ. ಈವರೆಗೂ ಈ ಅರ್ಜಿಯನ್ನು ಸಲ್ಲಿಸಿದವರ ಬಗ್ಗೆ ಯಾವುದೇ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಾಗಿಲ್ಲ.ಅರ್ಜಿದಾರರ ಲಿಂಗ, ವಯಸ್ಸು ಅಥವಾ ಅವರು ವಿವಾಹವಾಗಬೇಕೆಂದು ಕೋರಿರುವವರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.




























