ಗ್ಯಾಸ್ ಸ್ಟವ್ ನ ಪೈಪ್ ಹಿಡಿದು ಆಟವಾಡಿದ ಮಗು | ಕೆಲವೇ ಕ್ಷಣದಲ್ಲಿ ನಡೆಯಿತು ಅನಾಹುತ

23/06/2021
ರಾಮನಗರ: ಮಕ್ಕಳ ವಿಚಾರದಲ್ಲಿ ಪೋಷಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಕಾಗುವುದಿಲ್ಲ. ಚನ್ನಪಟ್ಟಣದಲ್ಲಿ ನಡೆದಿರುವ ಘಟನೆಯೊಂದು ಜನರನ್ನು ಬೆಚ್ಚಿ ಬೀಳಿಸಿದೆ.
ಬಿಸಿ ಸಾಂಬರ್ ಮೈಮೇಲೆ ಬಿದ್ದು ಒಂದೂವರೆ ವರ್ಷ ವಯಸ್ಸಿನ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆದಿದೆ.
ಚೌಡೇಶ್ ಮತ್ತು ರಾಧಾ ದಂಪತಿ ಮಗ, ಧನ್ವಿಕ್ ಮೃತ ಪಟ್ಟ ಮಗುವಾಗಿದ್ದು, ಮನೆಯಲ್ಲಿ ಗ್ಯಾಸ್ ಪೈಪ್ ಹಿಡಿದುಕೊಂಡು ಮಗು ಆಟವಾಡುತ್ತಿತ್ತು ಎನ್ನಲಾಗಿದೆ. ಈ ವೇಳೆ ಸ್ಟವ್ ನಲ್ಲಿದ್ದ ಬಿಸಿ ಸಾಂಬರ್ ಮಗುವಿನ ಮೇಲೆ ಬಿದ್ದು, ಮಗು ಗಂಭೀರವಾಗಿ ಗಾಯಗೊಂಡಿತ್ತು.
ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪಿದೆ. ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಕಬ್ಬಿನ ಗದ್ದೆಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ನಡೆಸಿ ಭೀಕರ ಹತ್ಯೆ