ಮಗುವಿನ ಮೃತದೇಹವನ್ನು ದೇವಸ್ಥಾನದ ಮುಂದೆ ಇಟ್ಟು ಅಜ್ಜಿ ಮಾಡಿದ್ದೇನು ಗೊತ್ತಾ? - Mahanayaka

ಮಗುವಿನ ಮೃತದೇಹವನ್ನು ದೇವಸ್ಥಾನದ ಮುಂದೆ ಇಟ್ಟು ಅಜ್ಜಿ ಮಾಡಿದ್ದೇನು ಗೊತ್ತಾ?

karavara
19/05/2021


Provided by

ಕಾರವಾರ: ಗಂಟಲಲ್ಲಿ ಶೇಂಗಾ ಬೀಜ ಸಿಕ್ಕಿಕೊಂಡು ಮಗು ಮೃತಪಟ್ಟಿದ್ದು, ಮೃತಪಟ್ಟ ಮಗುವನ್ನು ಬದುಕಿಸಿಕೊಡುವಂತೆ ಮಗುವಿನ ಅಜ್ಜಿ ದೇವಸ್ಥಾನದ ಮುಂದೆ ಮಗುವಿನ ಮೃತದೇಹ ಇಟ್ಟು ಗಂಟೆ ಬಾರಿಸಿದ ಘಟನೆ ನಡೆದಿದೆ.

ಇಲ್ಲಿನ ಗಣಪತಿ ಗಲ್ಲಿ ನಿವಾಸಿ ರಾಮನಾಥ ಎಂಬವರ ಎರಡೂವರೆ ವರ್ಷದ ಮಗ ಸಾತ್ವಿಕ್ ಮಂಗಳವಾರ ಸಂಜೆ ಶೇಂಗಾ ಬೀಜ ತಿನ್ನುತ್ತಿದ್ದ ವೇಳೆ ಆಕಸ್ಮಿಕವಾಗಿ ಗಂಟಲಲ್ಲಿ ಸಿಕ್ಕಿಕೊಂಡಿದೆ. ಈ ವೇಳೆ ಮನೆಯವರು ಏನೇನೋ ಪ್ರಯತ್ನಪಟ್ಟು ಒಂದು ಶೇಂಗಾವನ್ನ ಹೊರ ತೆಗೆದಿದ್ದಾರೆ. ಆದರೆ ಮತ್ತೆಯೂ ಮಗುವಿನ ಉಸಿರಾಟ ಸಹಜ ಸ್ಥಿತಿಗೆ ಬರಲಿಲ್ಲ. ಹಾಗಾಗಿ ಮಗುವನ್ನು ಆಸ್ಪತ್ರೆಗೆ ತಂದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿದಾಗ ಮತ್ತೊಂದು ಬೀಜ ಕೂಡ ಗಂಟಲಲ್ಲಿ ಸಿಲುಕಿಕೊಂಡಿತ್ತು. ಆದರೆ ಅಷ್ಟರಲ್ಲಿ ಮಗು ಮೃತಪಟ್ಟಿದೆ.

ಮಗುವಿನ ಸಾವನ್ನು ಸ್ವೀಕರಿಸಲು ಸಾಧ್ಯವಾಗದ ಅಜ್ಜಿ, ಮಗುವನ್ನು ದೇವರು ಕಾಪಾಡುತ್ತಾರೆ ಎನ್ನುವ ಆಸೆಯಿಂದ ಸಮೀಪದ ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಗಣಪತಿ ದೇವಸ್ಥಾನದ ಮುಂದೆ ಮಲಗಿಸಿ ಗಂಟೆ ಬಾರಿಸಿದ್ದಾರೆ.

ಇತ್ತೀಚಿನ ಸುದ್ದಿ