ಎಪ್ರಿಲ್ 1ರಿಂದ 4ರವರೆಗೆ “ಮಹಾನಾಯಕ ಜೈಭೀಮ್ ಟ್ರೋಫಿ-2021” ಕ್ರಿಕೆಟ್ ಪಂದ್ಯಾಟ - Mahanayaka
10:43 AM Saturday 23 - August 2025

ಎಪ್ರಿಲ್ 1ರಿಂದ 4ರವರೆಗೆ “ಮಹಾನಾಯಕ ಜೈಭೀಮ್ ಟ್ರೋಫಿ-2021” ಕ್ರಿಕೆಟ್ ಪಂದ್ಯಾಟ

03/02/2021


Provided by

ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಗಂಗೊಳ್ಳಿ ಬೈಂದೂರು ತಾಲೂಕು ಮತ್ತು ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘ ಬಾವಿಕಟ್ಟೆ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಜಗದೀಶ್ ಗಂಗೊಳ್ಳಿ ಹಾಗೂ ನಾಗರಾಜ್ ಬಾವಿಕಟ್ಟೆ ಇವರ ಸಾರಥ್ಯದಲ್ಲಿ ಪರಿಶಿಷ್ಟ ಜಾತಿ ಸಮಾಜದವರಿಗಾಗಿ ಅಂತಾರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ “ಮಹಾನಾಯಕ ಜೈಭೀಮ್ ಟ್ರೋಫಿ-2021″ ಆಯೋಜಿಸಲಾಗಿದೆ.

ಎಪ್ರಿಲ್ 1,2,3,4ರಂದು  ಸರ್ಕಾರಿ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಮೈದಾನ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ನಡೆಯಲಿದೆ. ಸೆಮಿಫೈನಲ್ ನಲ್ಲಿ ಪರಾಜಿತರಿಗೆ ಟ್ರೋಫಿ ನೀಡಲಾಗುವುದು ಎಂದು ಆಯೋಜಿತರು ಮಹಾನಾಯಕ ಡಾಟ್ ಇನ್ ಗೆ ತಿಳಿಸಿದ್ದಾರೆ.

ಪಂದ್ಯಾಟಕ್ಕೆ ವಿಶೇಷ ಆಹ್ವಾನಿತರಾಗಿ  ಡಾ.ಬಿ.ಆರ್.ಅಂಬೇಡ್ಕರ್ ಜನಪದ ವೇದಿಕೆ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಕೆ.ಪ್ರಸನ್ನ ಭಾಗವಹಿಸಲಿದ್ದಾರೆ. ಪಂದ್ಯಾಟದ ಕುರಿತು ಹೆಚ್ಚಿನ ಮಾಹಿತಿಗಾಗಿ  ಆಯೋಜಕರಲ್ಲಿ ಓರ್ವರಾದ ಜನದೀಶ್ ಗಂಗೊಳ್ಳಿ ಅವರ 9743494055 ನಂಬರ್ ಸಂಪರ್ಕಿಸಬಹುದು ಎಂದು ಆಯೋಜಕರಾದ ಜಗದೀಶ್ ಗಂಗೊಳ್ಳಿ ಹಾಗೂ  ಗಂಗೊಳ್ಳಿ ಡಿಎಸ್ ಎಸ್ ಪ್ರಧಾನ ಸಂಚಾಲಕ ನಾಗರಾಜ್ ಬಾವಿಕಟ್ಟೆ ತಿಳಿಸಿದ್ದಾರೆ.

ವಿಡಿಯೋ ನೋಡಿ

ಇತ್ತೀಚಿನ ಸುದ್ದಿ