ಮಹಾನಾಯಕ ಫಲಶ್ರುತಿ: ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್

ಚಿಕ್ಕಮಗಳೂರು: ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರೋ ಕಾರಣದಿಂದ ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ ಹಾಕಲಾಗಿದೆ.
ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜ ಪ್ರವಾಸಿ ತಾಣವಾಗಿರುವ ಈ ಸ್ಥಳಕ್ಕೆ ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಚಾರಣಕ್ಕೆ ಬ್ರೇಕ್ ಹಾಕಿದೆ.
7 ಕಿ.ಮೀ. ಚಾರಣ ಹೋಗಿ ಪ್ರವಾಸಿಗರು ಎತ್ತಿನಭುಜದ ಸೌಂದರ್ಯ ಸವಿಯುತ್ತಿದ್ದರು. ನಿರಂತರ ಮಳೆ, ಮಂಜುನಿಂದ ಜಾರುತ್ತಿರುವ ನೆಲದ ನಡುವೆಯೂ ಪ್ರವಾಸಿಗರು ಚಾರಣ ಮಾಡುತ್ತಿದ್ದರು. ಚಾರಣದ ವೇಳೆ ಅನಾಹುತವಾದ್ರೆ ರಕ್ಷಣೆ ಮಾಡೋದು ಭಾರೀ ಕಷ್ಟಸಾಧ್ಯ ಎಂಬ ಬಗ್ಗೆ ಮಹಾನಾಯಕ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ತಕ್ಷಣದಲ್ಲೇ ಕ್ರಮಕೈಗೊಂಡಿದೆ.
ಎತ್ತಿನಭುಜಕ್ಕೆ ಯಾವುದೇ ವಾಹನಗಳು ಹೋಗುವುದಿಲ್ಲ, ಏನಾದರೂ ಅನಾಹುತವಾದರೆ ಹೊತ್ತೇ ತರಬೇಕು. ಇದರ ಜೊತೆಗೆ ಕಾಡುಪ್ರಾಣಿಗಳ ಕಾಟ ಕೂಡ ಇದೆ. ಮಳೆಯಿಂದಾಗಿ ಇದು ಜಾರುವ ಪ್ರದೇಶದವಾಗಿದೆ. ಈ ವಿಚಾರವನ್ನು ಮಹಾನಾಯಕ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಇಂದಿನಿಂದ ಒಂದು ತಿಂಗಳ ಕಾಲ ಎತ್ತಿನಭುಜ ಪ್ರವಾಸಿ ತಾಣ ಸಂಪೂರ್ಣ ಬಂದ್ ಆಗಿರಲಿದೆ. ಎತ್ತಿನಭುಜದಲ್ಲಿ ಓರ್ವ ಕಾವಲುಗಾರನ ನೇಮಿಸಲು ಸೂಚನೆ ನೀಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: