ಬಿಜೆಪಿಯು ಭವಿಷ್ಯದಲ್ಲಿ ಆರ್‌ಎಸ್‌ಎಸ್ ಅನ್ನೇ ‘ನಕಲಿ ಆರ್‌ಎಸ್‌ಎಸ್’ ಅಂತಾ ಕರೆಯಬಹುದು: ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ - Mahanayaka
8:02 PM Saturday 15 - November 2025

ಬಿಜೆಪಿಯು ಭವಿಷ್ಯದಲ್ಲಿ ಆರ್‌ಎಸ್‌ಎಸ್ ಅನ್ನೇ ‘ನಕಲಿ ಆರ್‌ಎಸ್‌ಎಸ್’ ಅಂತಾ ಕರೆಯಬಹುದು: ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ

18/05/2024

ಬಿಜೆಪಿಯು ಭವಿಷ್ಯದಲ್ಲಿ ಆರ್‌ಎಸ್‌ಎಸ್ ನ್ನು ‘ನಕಲಿ ಆರ್‌ಎಸ್‌ಎಸ್’ ಎಂದು ಕರೆಯಬಹುದು ಮತ್ತು ನಿಷೇಧಿಸಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಬಾಳಾಸಾಹೇಬ್ ಠಾಕ್ರೆ ಯವರು ಮೋದಿಯವರ ಬೆನ್ನಿಗೆ ನಿಂತಿದ್ದರು. ಈಗ ಮೋದಿ ಶಿವಸೇನಾವನ್ನು ‘ನಕಲಿ’ ಎಂದು ಕರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಂಬೈನಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಉದ್ಧವ್ ಠಾಕ್ರೆ , ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇನ್ನು ಮುಂದೆ ‘ಆರ್‌ಎಸ್‌ಎಸ್ ಅಗತ್ಯವಿಲ್ಲ’ ಎಂದು ಹೇಳಿಕೊಂಡಿದ್ದಾರೆ. 100ನೇ ವರ್ಷಾಚರಣೆ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕೂಡ ಅಪಾಯದಲ್ಲಿದೆ. ಮೋದಿ ಶಿವಸೇನಾವನ್ನು ‘ನಕಲಿ ಸೇನಾ’ ಎಂದು ಕರೆದಿದ್ದಾರೆ. ಜತೆಗೆ, ನನ್ನನ್ನು ಬಾಳಾಸಾಹೇಬ್ ಠಾಕ್ರೆಯವರ ‘ನಕಲಿ ಸಂತಾನ’ವೆಂದು ಅವಹೇಳನ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಆರ್‌ಎಸ್‌ಎಸ್‌ಗೂ ‘ನಕಲಿ’ ಎಂದು ಹಣೆಪಟ್ಟಿ ಕಟ್ಟಿದರೂ ಅಚ್ಚರಿಪಡಬೇಕಾಗಿಲ್ಲ’ ಎಂದು ಕಿಡಿಕಾರಿದ್ದಾರೆ.

 

ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜೆ.ಪಿ.ನಡ್ಡಾ, ‘ನಾವು ಚಿಕ್ಕವರಿದ್ದಾಗ ಕಡಿಮೆ ಸಾಮರ್ಥ್ಯ ಹೊಂದಿದ್ದೆವು. ಆಗ ಆರ್‌ಎಸ್‌ಎಸ್ ಅಗತ್ಯವಿತ್ತು. ಇಂದು ನಾವು ಬೆಳೆದಿದ್ದೇವೆ, ಸಮರ್ಥರಾಗಿದ್ದೇವೆ. ಅದೇ ರೀತಿ ಬಿಜೆಪಿಯು ತಾನಾಗೇ ಮುನ್ನಡೆಯುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಹೇಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ