ಬಾಲಕಿ ಮೇಲಿನ ಅತ್ಯಾಚಾರ ಕೇಸನ್ನು ಮುಚ್ಚಿ ಹಾಕಿದ್ದನ್ನು ವರದಿ ಮಾಡಿದ್ದೇ ತಪ್ಪಂತೆ: ಪತ್ರಕರ್ತನ ಮೇಲೆ ಏಕನಾಥ್ ಶಿಂಧೆ ಬಣದಿಂದ ಗೂಂಡಾಗಿರಿ - Mahanayaka
12:59 AM Monday 15 - December 2025

ಬಾಲಕಿ ಮೇಲಿನ ಅತ್ಯಾಚಾರ ಕೇಸನ್ನು ಮುಚ್ಚಿ ಹಾಕಿದ್ದನ್ನು ವರದಿ ಮಾಡಿದ್ದೇ ತಪ್ಪಂತೆ: ಪತ್ರಕರ್ತನ ಮೇಲೆ ಏಕನಾಥ್ ಶಿಂಧೆ ಬಣದಿಂದ ಗೂಂಡಾಗಿರಿ

10/08/2023

8 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣವನ್ನು ಮುಚ್ಚಿ ಹಾಕುತ್ತಿರುವುದನ್ನು ವರದಿ ಮಾಡಿದ ಸಂದೀಪ್ ಮಹಾಜನ್ ಎಂಬ ಪತ್ರಕರ್ತನ ಮೇಲೆ ಶಿವಸೇನೆಯ ಏಕನಾಥ್ ಶಿಂಧೆ ಬಣದ ಬೆಂಬಲಿಗರು ಹಲ್ಲೆ ನಡೆಸಿ ಅನೈತಿಕ ಮೆರೆದಿದ್ದಾರೆ.

ನಡುರಸ್ತೆಯಲ್ಲೇ ಮೂವರು ಆತನನ್ನು ಮನಸೋ ಇಚ್ಛೆ ಥಳಿಸಿದ್ದು, ಇದರ ವಿಡಿಯೊ ವೈರಲ್ ಆಗುತ್ತಿದ್ದು ರಾಷ್ಟ್ರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಜಲಗಾಂವ್ ಜಿಲ್ಲೆಯ ಪಚೋರಾದಲ್ಲಿ ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಇದನ್ನು ಸಂದೀಪ್ ಮಹಾಜನ್ ತಮ್ಮ ಸ್ಥಳೀಯ ಪತ್ರಿಕೆ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ವರದಿ ಮಾಡಿದ್ದರು. ಪ್ರಕರಣವನ್ನು ಮುಚ್ಚಿಹಾಕಲು ಸ್ಥಳೀಯ ಶಾಸಕ ಕಿಶೋರ್ ಪಾಟೀಲ್ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಶಾಸಕ ಕಿಶೋರ್ ಪಾಟೀಲ್, ಏಕನಾಥ್ ಶಿಂಧೆ ಬಣದ ಶಾಸಕರಾಗಿದ್ದು, ಇದೇ ದ್ವೇಷದ ಹಿನ್ನೆಲೆಯಲ್ಲಿ ಶಿಂಧೆ ಬೆಂಬಲಿಗರೆಂದು ಹೇಳಿಕೊಂಡು ಕೆಲವರು ಸಂದೀಪ್ ಮಹಾಜನ್ ವಿರುದ್ಧ ದಾಳಿ ನಡೆಸಿದ್ದಾರೆ. ಹಲ್ಲೆ ನಡೆದ ಹಿಂದಿನ ದಿನವಷ್ಟೇ ಕಿಶೋರ್ ಪಾಟೀಲ್ ಸ್ವತಃ ಪತ್ರಕರ್ತರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ