ಯಶಸ್ಸಿನ ಗುಟ್ಟು ಬಯಲು ಮಾಡಿದ ಮಹೇಂದ್ರ ಸಿಂಗ್ ಧೋನಿ! - Mahanayaka
11:53 PM Saturday 23 - August 2025

ಯಶಸ್ಸಿನ ಗುಟ್ಟು ಬಯಲು ಮಾಡಿದ ಮಹೇಂದ್ರ ಸಿಂಗ್ ಧೋನಿ!

ms dhoni
25/05/2024


Provided by

ನವದೆಹಲಿ:  ಮಹೇಂದ್ರ ಸಿಂಗ್ ಧೋನಿ ಅವರು ಭಾರತ ತಂಡಕ್ಕೆ 2 ವಿಶ್ವಕಪ್‌ಗಳನ್ನು ನೀಡಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಅತ್ಯುತ್ತಮ ಆಟಗಾರರಾಗಿದ್ದಾರೆ.  ಅಲ್ಲದೇ ಐಪಿಎಲ್‌ ನಲ್ಲಿ ಸಿಎಸ್‌  ಕೆಯನ್ನು ಐದು ಬಾರಿ ಚಾಂಪಿಯನ್ ಮಾಡುವ ಮೂಲಕ ಮಹಿ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದರು.

ಇದೀಗ ಸಿಎಸ್‌ ಕೆ ಫ್ರಾಂಚೈಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧೋನಿ ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಯಾರಾದರೂ ಭಯಪಡುವುದು ಬಹಳ ಮುಖ್ಯ. ಭಯವಿಲ್ಲದಿದ್ದರೆ ನನ್ನ ಬುದ್ಧಿಯು ಹೊರಬರುವುದಿಲ್ಲ. ಭಯವು ನನ್ನನ್ನು ಬುದ್ಧಿವಂತ ಮತ್ತು ಧೈರ್ಯಶಾಲಿಯನ್ನಾಗಿ ಮಾಡುತ್ತದೆ ಎಂದಿದ್ದಾರೆ.

ನಾನು ಭಯ ಮತ್ತು ಒತ್ತಡವನ್ನು ಆನಂದಿಸುತ್ತೇನೆ. ಎರಡನ್ನೂ ಹೊಂದುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇವು ನನಗೆ ಸಹಾಯ ಮಾಡುತ್ತವೆ  ಎಂದು ಅವರು ಹೇಳಿದ್ದಾರೆ.

ನನಗೆ ಭಯವಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನನಗೆ ಭಯವಿದೆ ಭಯವಿಲ್ಲದೆ ನಾವು ಯಾವುದನ್ನೂ ಗೌರವಿಸುವುದಿಲ್ಲ. ಇವೆಲ್ಲವೂ ವೈಯಕ್ತಿಕ ಸುಧಾರಣೆಗೆ ತುಂಬಾ ಉಪಯುಕ್ತವಾಗಿದೆ ಎಂದು ಎಂ.ಎಸ್.ಧೋನಿ ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ