ಮತ ಕೇಳಲು ಬಂದ ಶಾಸಕ ಮಹೇಶ್ ಗೆ ತರಾಟೆ: ಪ್ರತಿಮೆಗೆ ಹಾರ ಹಾಕಲು ಅವಕಾಶ ಕೊಡದೇ ಆಕ್ರೋಶ - Mahanayaka

ಮತ ಕೇಳಲು ಬಂದ ಶಾಸಕ ಮಹೇಶ್ ಗೆ ತರಾಟೆ: ಪ್ರತಿಮೆಗೆ ಹಾರ ಹಾಕಲು ಅವಕಾಶ ಕೊಡದೇ ಆಕ್ರೋಶ

n mahesh
04/05/2023


Provided by

ಚಾಮರಾಜನಗರ: ಶಾಸಕ‌ ಎನ್.ಮಹೇಶ್ ಮತ ಕೇಳಲು ತೆರಳಿದ್ದ ವೇಳೆ ಜನರು ತರಾಟೆಗೆತ್ತಿಕೊಂಡು ವಾಪಸ್ ಕಳುಹಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ಮಸಣಾಪುರದಲ್ಲಿ ನಡೆದಿದೆ.

4 ಬಾರಿ ಅರ್ಜಿ ಕೊಟ್ಟರೂ ಕೆಲಸ ಆಗಲಿಲ್ಲ, ನಮ್ಮ‌ ಪಂಚಾಯ್ತಿ‌ ಕಡೆ ನೀವು ಬಂದೇ ಇಲ್ಲಾ, 4 ಬಾರಿ ನಿಮಗೆ ಮತ ಹಾಕಿದ್ದೇವೆ ಎಂದು ಗ್ರಾಮದ ಉಪ್ಪಾರ ಸಮುದಾಯದ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮದ ಭಗಿರಥ ಮಹರ್ಷಿ ಪ್ರತಿಮೆಗೆ ಹಾರ ಹಾಕಲು ಅವಕಾಶ ಮಾಡಿಕೊಡದೇ ನಾವು ಹಾರ ಹಾಕಿಕೊಳ್ಳುತ್ತೇವೆ, ನೀವು ಹೋಗಿ ಎಂದು ಆಕ್ರೋಶ ಹೊರಹಾಕಿ ವಾಪಾಸ್ ಕಳುಹಿಸಿದ್ದಾರೆ‌.‌  ಕೊಳ್ಳೇಗಾಲ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದ್ದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ