ಸಾವಿನ ಜೊತೆ ಹೋರಾಡುತ್ತಿದ್ದ ಮಹಿಳೆಯ ಬಾಯಿಗೆ ದನದ ಮೂತ್ರ ಸುರಿದ ಶಂಕಿತ ಬಿಜೆಪಿ ಕಾರ್ಯಕರ್ತ - Mahanayaka
10:23 PM Wednesday 15 - October 2025

ಸಾವಿನ ಜೊತೆ ಹೋರಾಡುತ್ತಿದ್ದ ಮಹಿಳೆಯ ಬಾಯಿಗೆ ದನದ ಮೂತ್ರ ಸುರಿದ ಶಂಕಿತ ಬಿಜೆಪಿ ಕಾರ್ಯಕರ್ತ

covid bjp
26/04/2021

ಸೂರತ್: ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯೋರ್ವರಿಗೆ  ಶಂಕಿತ ಬಿಜೆಪಿ ಕಾರ್ಯಕರ್ತನೋರ್ವ ದನದ ಮೂತ್ರ ಕುಡಿಸಿದ ಘಟನೆ ವರದಿಯಾಗಿದ್ದು,  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

ಈ ವಿಡಿಯೋವನ್ನು  ಸೂರತ್ ನ ಬಿಜೆಪಿ ನಾಯಕ  ಕಿಶೋರ್ ಜಿಂದಾಲ್ ಹಂಚಿಕೊಂಡಿದ್ದು, ಈ ವಿಡಿಯೋ ನೋಡಿದ ಸಾರ್ವಜನಿಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಬಳಿಕ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಆದರೆ ಈ ವಿಡಿಯೋವನ್ನು ಡೌನ್ ಲೋಡ್ ಮಾಡಿಕೊಂಡಿರುವ ನೆಟ್ಟಿಗರು ವಿಡಿಯೋವನ್ನು ಮತ್ತೆ  ಸಾಮಾಜಿಕ ಜಾಲತಾಣಗಳಲ್ಇ ಅಪ್ ಲೋಡ್ ಮಾಡಿದ್ದು, ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಘಟನೆಯ ವಿರುದ್ಧ ಯೂತ್ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಅತ್ಯಂತ ನಾಚಿಗೆಗೇಡಿನ ಸಂಗತಿಯಾಗಿದೆ.  ಸರ್ಕಾರದ ವಿರುದ್ಧ ಮಾತನಾಡಲು ಇದಕ್ಕಿಂತೆ ಹೆಚ್ಚಿನದು ಉಳಿದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ವೆಂಟಿಲೇಟರ್ ನಲ್ಲಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಮಹಿಳೆಯ ಬಾಯಿಗೆ ಬಿಜೆಪಿಯ ಶಾಲು ಹೊದ್ದ ವ್ಯಕ್ತಿಯೋರ್ವ ದನದ ಮೂತ್ರವನ್ನು ಸುರಿಯುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ