ನಿಷೇಧಾಜ್ಞೆಯ ನಡುವೆಯೇ ಉಡುಪಿಯಲ್ಲಿ ಮಹಿಷೋತ್ಸವ’ಕ್ಕೆ ಚಾಲನೆ!
15/10/2023
ಉಡುಪಿ: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮಹಿಷ ದಸರಾ ಬದಲು ಹಮ್ಮಿಕೊಳ್ಳಲಾದ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷೋತ್ಸವ’ಕ್ಕೆ ನಿಷೇಧಾಜ್ಞೆ ಮಧ್ಯೆಯೂ ರವಿವಾರ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಚಾಲನೆ ನೀಡಲಾಯಿತು.
ಉಡುಪಿ ಜಿಲ್ಲಾಡಳಿತ ಮೆರವಣಿಗೆ ಹಾಗೂ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಭವನದ ಆವರಣದೊಳಗೆಯೇ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ವತಿಯಿಂದ ಆಯೋಜಿಸಲಾದ ಮಹಿಷೋತ್ಸವ ಮೆರವಣಿಗೆಗೆ ಸಂಶೋಧಕ, ಬರಹಗಾರ ವಿಠಲ್ ವಗ್ಗನ್ ಚಾಲನೆ ನೀಡಿದರು


ಈ ಸಂದರ್ಭದಲ್ಲಿ ಚಿಂತಕ ನಾರಾಯಣ ಮಣೂರು, ಹೋರಾಟಗಾರ ಶ್ರೀರಾಮ ದಿವಾಣ, ಜಯನ್ ಮಲ್ಪೆ, ಯುವ ಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್, ಲೋಕೇಶ್ ಪಡುಬಿದ್ರಿ, ಶೇಖರ ಹೆಜ್ಮಾಡಿ, ದಯಾನಂದ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಅಲ್ಲದೆ ಕೆಎಸ್ ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ.




























