ಅತ್ತಿಗೆಯ ಬೆಡ್ ರೂಮ್ ಗೆ ನುಗ್ಗಿದ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿದ ಮೈದುನ

ಚಿಕ್ಕಬಳ್ಳಾಪುರ: ಅತ್ತಿಗೆಯ ಬೆಡ್ರೂಮ್ ಗೆ ನುಗ್ಗಿದ ವ್ಯಕ್ತಿಯನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರ ಹತ್ಯೆ ಮಾಡಿ ಪೋಲಿಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಸಾದಲಿ ಗ್ರಾಮದ 40 ವರ್ಷದ ಅಂಜಿನಪ್ಪ ಎಂದು ಗುರುತಿಸಲಾಗಿದೆ.
ಆಶಾ ಎಂಬುವವರು ಒಂಟಿಯಾಗಿದ್ದ ವೇಳೆ ಆಂಜಿನಪ್ಪ ಬೆಡ್ ರೂಮ್ ಗೆ ನುಗ್ಗಿದ್ದಾನೆ. ಕೂಡಲೇ ಮಹಿಳೆ ಮೈದುನನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಬಂದ ಮೈದುನ ರಾಘವೇಂದ್ರ ಹಾಗೂ ಅಂಜಿನಪ್ಪನ ನಡುವೆ ಗಲಾಟೆ ನಡೆದಿದ್ದು, ರಾಘವೇಂದ್ರ ಕಬ್ಬಿಣದ ರಾಡ್ ನಿಂದ ಅಂಜಿನಪ್ಪನ ಮೇಲೆ ಹಲ್ಲೆ ನಡೆಸಿದ್ದು, ಅಂಜಿನಪ್ಪನನ್ನು ಹತ್ಯೆ ಮಾಡಿದ್ದಾನೆ.
ಬಳಿಕ ಬಳಿಕ ತಾನೇ ಹೋಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂಜಿನಪ್ಪ ಮತ್ತು ಆಶಾಗೆ ಕಳೆದ 1 ವರ್ಷಗಳಿಂದ ಪರಿಚಯವಿತ್ತು ಎನ್ನಲಾಗಿದೆ. ಅಂಜಿನಪ್ಪನನ್ನು ಅವೈಡ್ ಮಾಡಿದರೂ, ಆತ ಬಲವಂತವಾಗಿ ಮನೆಗೆ ಬಂದಿದ್ದ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಶಾ ಹಾಗೂ ರಾಘವೇಂದ್ರ ಇಬ್ಬರನ್ನೂ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth