ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ಮೇಲುಗೈ: ಆರು ಭಯೋತ್ಪಾದಕರ ಹತ್ಯೆ; ಇಬ್ಬರು ಸೈನಿಕರು ಹುತಾತ್ಮ - Mahanayaka

ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ಮೇಲುಗೈ: ಆರು ಭಯೋತ್ಪಾದಕರ ಹತ್ಯೆ; ಇಬ್ಬರು ಸೈನಿಕರು ಹುತಾತ್ಮ

07/07/2024


Provided by

ನಿನ್ನೆ ಸಂಜೆ ಪ್ರಾರಂಭವಾದ ಅವಳಿ ಎನ್ ಕೌಂಟರ್ ಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಆರು ಭಯೋತ್ಪಾದಕರನ್ನು ಹೊಡೆದುರುಳಿಸುವ ಮೂಲಕ ಭದ್ರತಾ ಪಡೆಗಳು ಇಂದು ಪ್ರಮುಖ ಯಶಸ್ಸನ್ನು ಸಾಧಿಸಿವೆ. ದುರದೃಷ್ಟವಶಾತ್ ಕರ್ತವ್ಯದ ವೇಳೆ ಇಬ್ಬರು ಸೈನಿಕರು ಹುತಾತ್ಮರಾದರು.

ದಕ್ಷಿಣ ಜಿಲ್ಲೆಯ ಕುಲ್ಗಾಮ್‌ನಲ್ಲಿ ನಡೆದ ಅವಳಿ ಎನ್ ಕೌಂಟರ್ ಗಳಲ್ಲಿ ಈವರೆಗೆ ಆರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್.ಆರ್.ಸ್ವೈನ್ ಘೋಷಿಸಿದ್ದಾರೆ. ಆರು ಭಯೋತ್ಪಾದಕರನ್ನು ಹತ್ಯೆ ಮಾಡಿರುವುದು ದೊಡ್ಡ ಸಾಧನೆ ಎಂದು ಅವರು ಬಣ್ಣಿಸಿದರು.

“ಇಲ್ಲಿಯವರೆಗೆ, ಆರು ಭಯೋತ್ಪಾದಕರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತ್ಯೇಕ ಸ್ಥಳಗಳಲ್ಲಿ ಎರಡು ಎನ್ ಕೌ ಗಳು ನಡೆದವು. ಆರು ಭಯೋತ್ಪಾದಕರನ್ನು ಹತ್ಯೆ ಮಾಡಿರುವುದು ನಿಸ್ಸಂಶಯವಾಗಿ ಒಂದು ಮೈಲಿಗಲ್ಲು ಸಾಧನೆಯಾಗಿದೆ. ಎನ್‌ಕೌಂಟರ್ ಸ್ಥಳಗಳಲ್ಲಿ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ” ಎಂದು ಡಿಜಿಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ