ಮಕ್ಕಳಾಗಿಲ್ಲ ಎಂದು ಮಹಿಳೆಯ ಗುಪ್ತಾಂಗವನ್ನು ರೇಜರ್ ನಿಂದ ಕೊಯ್ದ ಪತಿ! - Mahanayaka
2:55 PM Saturday 15 - November 2025

ಮಕ್ಕಳಾಗಿಲ್ಲ ಎಂದು ಮಹಿಳೆಯ ಗುಪ್ತಾಂಗವನ್ನು ರೇಜರ್ ನಿಂದ ಕೊಯ್ದ ಪತಿ!

lakno
29/12/2022

ಲಕ್ನೋ: ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಿಲ್ಲ ಎಂದು ವ್ಯಕ್ತಿಯೋರ್ವ ತನ್ನ ಪತ್ನಿಯ ಖಾಸಗಿ ಅಂಗವನ್ನು ರೇಜರ್ ನಿಂದ ಕೊಯ್ದು ವಿಕೃತಿ ಮೆರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮದುವೆಯಾಗಿ 6 ವರ್ಷಗಳು ಕಳೆದರೂ ಮಕ್ಕಳಾಗಿಲ್ಲ ಇದು ಪತ್ನಿಯ ತಪ್ಪು ಎಂದು ಭಾವಿಸಿದ ಅವಿವೇಕಿ ಪತಿ, ತನ್ನ ಪತ್ನಿಗೆ ಪ್ರತಿನಿತ್ಯ ಕಿರುಕುಳ ನೀಡಲು ಆರಂಭಿಸಿದ್ದ. ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ಚಟ ಹೊಂದಿದ್ದ ಪತಿ ಒಂದಲ್ಲ ಒಂದು ಕಾರಣಕ್ಕೆ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.
ಈತನ ಉಪಟಳದಿಂದ ಬೇಸತ್ತ ಮಹಿಳೆ ಕಳೆದ ಮೂರು ತಿಂಗಳ ಹಿಂದೆ ತನ್ನ ಪೋಷಕರ ಮನೆಗೆ ತೆರಳಿದ್ದಳು. ಈ ವೇಳೆ ಅಲ್ಲಿಗೂ ಬಂದಿದ್ದ ಆತ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಮನೆಗೆ ಬಂದ ಬಳಿಕ ಮತ್ತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದು, ಪತ್ನಿ ವಿರೋಧಿಸಿದಾಗ ರೇಜರ್ ನಿಂದ ಖಾಸಗಿ ಅಂಗಕ್ಕೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಮಹಿಳೆ ತನ್ನ ಸಹೋದರನಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ ಸಂತ್ರಸ್ತ ಮಹಿಳೆ ಸಹೋದರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.

ಆರೋಪಿ ಪತಿಯನ್ನು ಲಕ್ನೋದ ಮೋಹನ್ಲಾಲ್ಗಂಜ್ ಪೊಲೀಸರು ಬಂಧಿಸಿದ್ದಾರೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ವಿರೋಧಿಸಿದ್ದಕ್ಕೆ ಆತ ಪತ್ನಿಯ ಮೇಲೆ ವಿಕೃತಿ ಮೆರೆದಿದ್ದರೂ, 6 ವರ್ಷಗಳಾದರೂ ಮಕ್ಕಳಿರಲಿಲ್ಲ ಹಾಗಾಗಿ ಈ ಕೃತ್ಯ ನಡೆಸಿದ್ದೇನೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ