ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ ಪತಿ ರಾಮು‌ ಕೊರೊನಾಕ್ಕೆ ಬಲಿ - Mahanayaka

ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ ಪತಿ ರಾಮು‌ ಕೊರೊನಾಕ್ಕೆ ಬಲಿ

26/04/2021



Provided by

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮಾಲಾಶ್ರೀ ಅವರ ಪತಿ, ನಿರ್ಮಾಪಕ ರಾಮು ಕೊರೊನಾಕ್ಕೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ರಾಮು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಕಳೆದ ಒಂದು ವಾರಗಳಿಂದ ರಾಮು‌‌ ಅವರು ಕೊರೋನಾದೊಂದಿಗೆ ಹೋರಾಟ ನಡೆಸುತ್ತಿದ್ದರು.

ರಾಮು‌ ಅವರು‌ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದವರಾಗಿದ್ದಾರೆ. ಕನ್ನಡ ಸಿನಿಮಾದಲ್ಲಿ‌ ರಾಮು‌ ಅವರಿಗೆ ವಿಶೇಷವಾದ ಹೆಸರಿದೆ. ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡುತ್ತಿದ್ದರು.

ಇತ್ತೀಚಿನ ಸುದ್ದಿ