ವಯನಾಡ್ ಗೆ ಸೇನಾ ಸಮವಸ್ತ್ರದಲ್ಲಿ ಬಂದ ಮಲಯಾಳಂ ನಟ ಮೋಹನ್ ಲಾಲ್! - Mahanayaka
8:17 AM Sunday 14 - September 2025

ವಯನಾಡ್ ಗೆ ಸೇನಾ ಸಮವಸ್ತ್ರದಲ್ಲಿ ಬಂದ ಮಲಯಾಳಂ ನಟ ಮೋಹನ್ ಲಾಲ್!

mohanlal
03/08/2024

ವಯನಾಡ್: ಭೂಕುಸಿತದಿಂದ ನಲುಗಿಹೋಗಿರುವ ವಯನಾಡ್ ಗೆ ಮಲಯಾಳಂನ ಸ್ಟಾರ್ ನಟ ಹಾಗೂ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಇಂದು ಆಗಮಿಸಿದ್ದಾರೆ.
ಮಿಲಿಟರಿ ಸಮವಸ್ತ್ರದಲ್ಲಿ ಮೆಪ್ಪಾಡಿಗೆ ಆಗಮಿಸಿದ್ದು, ಇವರನ್ನುಭಾರತಿಯ ಸೇನೆ ಬರಮಾಡಿಕೊಂಡಿದೆ. ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ನಿರಾಶ್ರಿತರಿಗೆ ಸಾಂತ್ವನ ಹೇಳಿದ್ದಾರೆ.


Provided by

ವಯನಾಡು ದುರಂತದ ಸಂತ್ರಸ್ತರಿಗೆ ಪರಿಹಾರ ನೀಡಲು ಅವಿರತವಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿಸ್ವಾರ್ಥ ಸ್ವಯಂಸೇವಕರು, ಪೊಲೀಸ್, ಅಗ್ನಿಶಾಮಕ ಮತ್ತು ರಕ್ಷಣಾ ಪಡೆಗಳು, ಎನ್ ಡಿ ಆರ್ ಎಫ್, ಭಾರತೀಯ ಸೇನೆ ಮತ್ತು ಅಧಿಕಾರಿಗಳ ಧೈರ್ಯಕ್ಕೆ ನಾನು ವಂದಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮೋಹನ್ ಲಾಲ್ ಬರೆದುಕೊಂಡಿದ್ದಾರೆ.

ಈಗಾಗಲೇ ನಟ ಮೋಹನ್ ಲಾಲ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಮಾತ್ರವಲ್ಲದೆ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪುನರ್ವಸತಿ ನಿರ್ಮಿಸಲು ಕೈ ಜೋಡಿಸುವುದಾಗಿ ಅವರು ತಿಳಿಸಿದರು.

ನಾವೀಗ ಮೊದಲು ಸವಾಲುಗಳನ್ನು ಎದುರಿಸಿದ್ದೇವೆ ಮತ್ತು ಅದರಿಂದ ಬಲವಾಗಿ ಹೊರಬಂದಿದ್ದೇವೆ. ಈ ಕಷ್ಟದ ಸಮಯದಲ್ಲಿ ಒಟ್ಟಾಗಿ ನಿಂತು ನಮ್ಮ ಒಗ್ಗಟ್ಟಿನ ಶಕ್ತಿಯನ್ನು ತೋರಿಸಬೇಕೆಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ. ಜೈಹಿಂದ್ ಎಂದು ಮೋಹನ್ ಲಾಲ್ ಭಾವುಕವಾಗಿ ಬರೆದುಕೊಂಡು, ರಕ್ಷಣಾ ಕಾರ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ