ನನ್ನ ಬ್ಲೌಸ್ ಒಳಗೆ ಕೈ ಹಾಕಿದ: ಆಶೀರ್ವಾದದ ನೆಪದಲ್ಲಿ ಅರ್ಚಕನಿಂದ ನಟಿಗೆ ಲೈಂಗಿಕ ಕಿರುಕುಳ - Mahanayaka

ನನ್ನ ಬ್ಲೌಸ್ ಒಳಗೆ ಕೈ ಹಾಕಿದ: ಆಶೀರ್ವಾದದ ನೆಪದಲ್ಲಿ ಅರ್ಚಕನಿಂದ ನಟಿಗೆ ಲೈಂಗಿಕ ಕಿರುಕುಳ

lishalliny kanaran
11/07/2025


Provided by

ಮಲೇಷ್ಯಾದ  ಸೆಪಾಂಗ್‌ ನ ಮಾರಿಯಮ್ಮನ್ ದೇವಸ್ಥಾನದಲ್ಲಿ ಹಿಂದೂ ಅರ್ಚಕನೊಬ್ಬ ಭಾರತೀಯ ಮೂಲದ ನಟಿ ಮತ್ತು ದೂರದರ್ಶನ ನಿರೂಪಕಿ ಹಾಗೂ 2021 ರಲ್ಲಿ ಮಿಸ್ ಗ್ರ್ಯಾಂಡ್ ಮಲೇಷ್ಯಾ ವಿಜೇತೆಯೂ ಆಗಿರುವ ಲಿಶಲ್ಲಿನಿ ಕನರನ್ ಅವರಿಗೆ ಆಶೀರ್ವಾದ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಲಿಶಲ್ಲಿನಿ ಕನರನ್ ಅವರ ತಾಯಿ ಭಾರತದಲ್ಲಿದ್ದ ಕಾರಣ ಜೂನ್ 21ರಂದು ಒಬ್ಬಂಟಿಯಾಗಿ ದೇವಸ್ಥಾನಕ್ಕೆ ಹೋಗಿದ್ದರು. ನನಗೆ ಈ ಆಚರಣೆಗಳೆಲ್ಲವೂ ಹೊಸದಾಗಿತ್ತು.  ದೇವಸ್ಥಾನದಲ್ಲಿ ಅರ್ಚಕರು ನೀಡುವ ಮಾರ್ಗದರ್ಶನವೇ ನನಗೆ ಆಸರೆಯಾಗಿತ್ತು. ಹೀಗಾಗಿ ಅವರನ್ನು ನಂಬಿದ್ದೆ.

ಅರ್ಚಕ ನನ್ನ ಬಳಿಗೆ ಬಂದು ನಿನ್ನ ರಕ್ಷಣೆಗಾಗಿ ಪವಿತ್ರ ನೀರು ಹಾಗೂ ದಾರಕಟ್ಟಬೇಕಿದೆ ಅದು ಆಶೀರ್ವಾದ ಎಂದು ಹೇಳಿದರು. ಪೂಜೆ ಮುಗಿದ ಮೇಲೆ ನನ್ನನ್ನು ಭೇಟಿಯಾಗು ಎಂದು ಅರ್ಚಕ ಹೇಳಿದ್ದ. ಸುಮಾರು 1 ಗಂಟೆಗಿಂತಲೂ ಹೆಚ್ಚು  ನಟಿ ಕಾದಿದ್ದರು. ಬಳಿಕ ಆತ ತನ್ನ ಖಾಸಗಿ ಕಚೇರಿಗೆ ಕರೆದೊಯ್ದು ತುಂಬಾ ವಾಸನೆ ಬೀರುವ ದ್ರವವನ್ನು ಕಣ್ಣಿಗೆ ಚಿಮುಕಿಸಿದ್ದು, ನಂತರ ಎದೆಯನ್ನು ಸ್ಪರ್ಶಿಸಿದ್ದು, ಬಟ್ಟೆ ಬಿಚ್ಚಲು ಹೇಳಿದ್ದಾರೆ. ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಅರ್ಚಕ ನಟಿಯನ್ನು ಗದರಿಸಿದ್ದ, ಬಳಿಕ ಹಿಂದೆ ನಿಂತು ಬ್ಲೌಸ್ ಒಳಗೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ನಟಿ ಆರೋಪಿಸಿದರು.

ನಾನು ಶಾಂತಿ ಬಯಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಆದರೆ ನನಗೆ ಅಲ್ಲಿ ನಡೆದ ಲೈಂಗಿಕ ಹಲ್ಲೆ ತೀವ್ರವಾಗಿ ಘಾಸಿಗೊಳಿಸಿದೆ. ಅಲ್ಲಿ ನಡೆದ ದ್ರೋಹ ಮನಸ್ಸಿಗೆ ಆಳವಾದ ನೋವನ್ನುಂಟು ಮಾಡಿದೆ. ಘಟನೆ ನನಗೆ ತೀವ್ರವಾದ ಅಸಹ್ಯವನ್ನುಂಟು ಮಾಡಿತು ಎಂದು ಅವರು ಹೇಳಿದ್ದಾರೆ.

ಜುಲೈ 4 ರಂದು ಲಿಶಲ್ಲಿನಿ ಕನರನ್ ಅರ್ಚಕನ ವಿರುದ್ಧ ದೂರು ದಾಖಲಿಸಿದ್ದರು.  ದೂರು ದಾಖಲಾಗುತ್ತಿದ್ದಂತೆಯೇ ಅರ್ಚಕ ಪರಾರಿಯಾಗಿದ್ದಾನೆ. ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಹೆಸರು ಹಾಳಾಗುತ್ತದೆ ಎನ್ನುವ ನೆಪದಲ್ಲಿ ನಟಿಗೆ ಸಹಾಯ ಮಾಡುವ ಬದಲು ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದರು ಎಂದು ನಟಿ ಆರೋಪಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ