ಮಲೆಕುಡಿಯ ಸಮುದಾಯದವರ ರಸ್ತೆ ಮುಚ್ಚಿ ಕುಟುಂಬಕ್ಕೆ ದಿಗ್ಬಂಧನ: ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಕುಟುಂಬ - Mahanayaka
10:40 AM Wednesday 27 - August 2025

ಮಲೆಕುಡಿಯ ಸಮುದಾಯದವರ ರಸ್ತೆ ಮುಚ್ಚಿ ಕುಟುಂಬಕ್ಕೆ ದಿಗ್ಬಂಧನ: ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಕುಟುಂಬ

malekudiya
21/10/2022


Provided by

ಬೆಳ್ತಂಗಡಿ: ಮಲೆಕುಡಿಯ ಸಮುದಾಯದ ಕುಟುಂಬವೊಂದು ಕಳೆದ ಹಲವು ವರ್ಷಗಳಿಂದ  ಉಪಯೋಗಿಸುತ್ತಿದ್ದ ಗ್ರಾಮ ಪಂಚಾಯತ್ ರಸ್ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಇತರರು ಸೇರಿ  ಮುಚ್ಚಿ ಈ ಕುಟುಂಬಕ್ಕೆ ದಿಗ್ಬಂಧನ ವಿಧಿಸಿದ ಘಟನೆ ನೆರಿಯ ಗ್ರಾಮದಿಂದ ವರದಿಯಾಗಿದೆ.

ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿಂದ  ಹಾದುಹೋಗುವ ಗ್ರಾಮ ಪಂಚಾಯತ್ ರಸ್ತೆಯನ್ನು ಗ್ರಾ.ಪಂ ಅಧ್ಯಕ್ಷೆ ವಸಂತ, ವಾಸು, ಹಾಗೂ ವಿಜಯ ಎಂಬವರು ಸೇರಿ ಮುಚ್ಚಿ ಮಲೆಕುಡಿಯ ಸಮುದಾಯದ ಕುಟುಂಬಕ್ಕೆ  ರಸ್ತೆಯೇ ಇಲ್ಲದಂತೆ ಮಾಡಲಾಗಿದೆ ಎಂದು ಆರೋಪಿಸಿ ಸಮಸ್ಯೆಗೆ ಒಳಗಾಗಿರುವ ಮನೆಯವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ರಾಮದ ಸ.ನಂ 186/1 ರಲ್ಲಿ 1 ಎಕರೆ ಜಾಗ ಮಲೆಕುಡಿಯ ಸಮುದಾಯದ ಕಮಲ ಎಂಬವರಿಗೆ 2016 ರಲ್ಲಿ ಮಂಜೂರು ಮಾಡಲಾಗಿದೆ . ಸರಿ ಸುಮಾರು 75 ವರ್ಷಗಳಿಂದಲೂ ಇಲ್ಲಿ ವಾಸ್ತವಿದ್ದು , ರಸ್ತೆ ಸಂಪರ್ಕ ಇತ್ತು. ಆದರೆ ಇದೀಗ ಏಕಾಏಕಿ ರಸ್ತೆ ಮುಚ್ಚುವ ಮೂಲಕ ಎರಡು ಮನೆಗಳ ಸಂಪರ್ಕ ಕಡಿತಗೊಳಿಸಲಾಗಿದೆ.

ಈ ಬಗ್ಗೆ ಈಗಾಗಲೇ ಕಮಲ ಅವರ ಮಗ ಹರಿಪ್ರಸಾದ್ ಅವರು‌ ನೆರಿಯ ಗ್ರಾಮ ಪಂಚಾಯತಿಗೆ ಹಾಗೂ ಜಿಲ್ಲಾಡಳಿತಕ್ಕೂ , ಧರ್ಮಸ್ಥಳ ಪೋಲಿಸ್ ಠಾಣೆಗೂ ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಈವರೆಗೂ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಎರಡು ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದು ತಮಗೆ ನ್ಯಾಯ ಒದಗಿಸುವಂತೆ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾ.ಪಂ ಅಧ್ಯಕ್ಷೆ ವಸಂತಿ ಅವರು ಇದು ತಲ್ಲ ಜಮೀನಿನ ಮೂಲಕ ಇರುವ ರಸ್ತೆಯಾಗಿದ್ದು ಅವರಿಗೆ ಬೇರೆ ರಸ್ತೆಯಿದೆ. ತಮಗೆ ಇದರಿಂದಾಗಿ ಸಮಸ್ಯೆಯಾಗಿದೆ ಅದರಿಂದಾಗಿ ಈ ರಸ್ತೆಯನ್ನು ತಾವು ತಾತ್ಕಾಲಿಕವಾಗಿ ಮುಚ್ವಲಾಗಿದೆ ಎಂದು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ