ಬಾಂಗ್ಲಾದೇಶ ಬಿಕ್ಕಟ್ಟು ವಿಚಾರ: ನಮ್ಮ ಮನೆ ಬಾಗಿಲಿಗೆ ಬಂದರೆ ಆಶ್ರಯ ನೀಡುತ್ತೇವೆ ಎಂದ ದೀದಿ

ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು ನಮ್ಮ ಮನೆ ಬಾಗಿಲು ತಟ್ಟಿದರೆ ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅವರಿಗೆ ಆಶ್ರಯ ನೀಡುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ.
ಬಾಂಗ್ಲಾದೇಶ ಮತ್ತೊಂದು ದೇಶವಾಗಿರುವುದರಿಂದ ನಾನು ಅದರ ಬಗ್ಗೆ ಏನನ್ನೂ ಮಾತನಾಡಲು ಸಾಧ್ಯವಿಲ್ಲ. ಭಾರತ ಸರ್ಕಾರ ಅದರ ಬಗ್ಗೆ ಮಾತನಾಡುತ್ತದೆ. ಆದರೆ ಅಸಹಾಯಕ ಜನರು (ಬಾಂಗ್ಲಾದೇಶದಿಂದ) ಬಂಗಾಳದ ಬಾಗಿಲು ತಟ್ಟಿದರೆ, ನಾವು ಅವರಿಗೆ ಆಶ್ರಯ ನೀಡುತ್ತೇವೆ. ವಿಶ್ವಸಂಸ್ಥೆಯ ನಿರ್ಣಯವಿದೆ. ನೆರೆಹೊರೆಯವರು ನಿರಾಶ್ರಿತರನ್ನು ಗೌರವಿಸುತ್ತಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಕೋಲ್ಕತಾದಲ್ಲಿ ಭಾರಿ ಮಳೆಯ ನಡುವೆ ತೃಣಮೂಲ ಕಾಂಗ್ರೆಸ್ ನ ಮೆಗಾ ‘ಹುತಾತ್ಮರ ದಿನ’ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಸಿಲುಕಿರುವ ಬಂಗಾಳದ ನಿವಾಸಿಗಳಿಗೆ ಎಲ್ಲಾ ಸಹಕಾರವನ್ನು ನಾನು ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth