ಸರ್ಕಾರಿ ಉದ್ಯೋಗ ಪಡೆಯಲು ರೈಲು ದುರಂತದಲ್ಲಿ ತಾಯಿ ಸತ್ತಿದ್ದಾರೆಂದು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ವ್ಯಕ್ತಿ: ಕೊನೆಗೆ ಏನಾಯ್ತು..? - Mahanayaka

ಸರ್ಕಾರಿ ಉದ್ಯೋಗ ಪಡೆಯಲು ರೈಲು ದುರಂತದಲ್ಲಿ ತಾಯಿ ಸತ್ತಿದ್ದಾರೆಂದು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ವ್ಯಕ್ತಿ: ಕೊನೆಗೆ ಏನಾಯ್ತು..?

sanjay kumar
09/06/2023


Provided by

ಸುಳ್ಳಿಗೂ ಒಂದು ‌ಮಿತಿ ಬೇಡ್ವಾ..?
ಈ ಮಾತು ಹೇಳೋಕೇ ಒಂದು ಕಾರಣ ಇದೆ.‌ ವ್ಯಕ್ತಿಯೊಬ್ಬ ಸರ್ಕಾರಿ ನೌಕರಿಯ ಆಸೆಗಾಗಿ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಮೊನ್ನೆ ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲೇ ತನ್ನ ತಾಯಿ ತೀರಿ ಹೋಗಿದ್ದಾರೆಂದು ಪಾಟ್ನಾದ ಸಂಜಯ್ ಕುಮಾರ್ ಎಂಬುವವರು ಅಧಿಕಾರಿಗಳಿಗೆ ಸುಳ್ಳು ಹೇಳಿದ್ದಾನೆ.

ಬಾಲ್​ ಸೋರ್​ ರೈಲು ಅಪಘಾತದ ನಂತರ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ತಾನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸಿದ್ದಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅವನ ತಾಯಿ ರೈಲು ಅಪಘಾತದಲ್ಲಿ ಅಲ್ಲ. 2018ರಲ್ಲಿಯೇ ನಿಧನ ಹೊಂದಿದ್ದರ ಮಾಹಿತಿ ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.

ಈ ವ್ಯಕ್ತಿ ಸಚಿವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾನೆ. ಆಗ ರೈಲು ಭವನದಲ್ಲಿ ಅವರನ್ನು ಕಾಣಲು ತಿಳಿಸಲಾಗಿದೆ. ಆ ಪ್ರಕಾರ ಅವನು ಸಚಿವರ ಕಚೇರಿಗೆ ತೆರಳಿದ್ಧಾನೆ. ಅಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವಾಗ ಅವನ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.
ತನ್ನ ತಾಯಿ ಕೋರಮಂಡಲ್​ ಎಕ್ಸ್​ಪ್ರೆಸ್​ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಹಾಗಾದ್ರೆ ನಿಮ್ಮ ತಾಯಿಯ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿ, ಸಾಕ್ಷ್ಯಗಳನ್ನು ಒದಗಿಸಿ ಎಂದು ಅಧಿಕಾರಿಗಳು ಕೇಳಿದಾಗ ಅವನು ತಬ್ಬಿಬ್ಬಾಗಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ತಾನು ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್​ ಬುಕ್​ ಮಾಡಿದ್ದೆ, ಅವನ ಹೆಸರು ನೆನಪಿಲ್ಲ. ಅಲ್ಲದೆ ಸೀಟ್​ ವೇಟಿಂಗ್​ ಲಿಸ್ಟ್​ ನಲ್ಲಿತ್ತು ಎಂದು ಹೇಳಲು ಪ್ರಯತ್ನಿಸಿದ್ದಾನಾದರೂ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸುವಲ್ಲಿ ವಿಫಲನಾಗಿದ್ದಾನೆ. ಅಧಿಕಾರಿಗಳಿಗೆ ಅನುಮಾನ ದಟ್ಟವಾಗಿದ್ದರಿಂದ ಅವನನ್ನು ಕೂಡಲೇ ಬಂಧಿಸಿದ್ದಾರೆ.

ಬಾಲ್​ ಸೋರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ರೈಲ್ವೇ ಸಚಿವಾಲಯವು ಪರಿಹಾರ ಘೋಷಿಸಿದಾಗ, ಸಂಜಯ್​ ಸಚಿವರನ್ನು ಸಂಪರ್ಕಿಸಿ ಪರಿಹಾರದ ಬದಲಾಗಿ ತನಗೆ ಸರ್ಕಾರಿ ನೌಕರಿ ನೀಡಬೇಕೆಂದು ಕೇಳಲು ಹೋಗಿ ಬಂಧಿತನಾಗಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ