ವಯಸ್ಸಾದ ತಾಯಿಯನ್ನು ದೇವಸ್ಥಾನದ ಆವರಣದಲ್ಲಿ ಅಟ್ಟಾಡಿಸಿ ಥಳಿಸಿದ ಪಾಪಿ ಮಗ! - Mahanayaka

ವಯಸ್ಸಾದ ತಾಯಿಯನ್ನು ದೇವಸ್ಥಾನದ ಆವರಣದಲ್ಲಿ ಅಟ್ಟಾಡಿಸಿ ಥಳಿಸಿದ ಪಾಪಿ ಮಗ!

temple in bulandshahr
03/04/2024


Provided by

ನವದೆಹಲಿ: ಪುತ್ರನೋರ್ವ ತನ್ನ ತಾಯಿಯನ್ನು ದೇವಸ್ಥಾನದ ಆವರಣದಲ್ಲಿ ಕೋಲಿನಿಂದ ಹಲ್ಲೆ ನಡೆಸುತ್ತಾ ಅಟ್ಟಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು,  ಘಟನೆಯ ದೃಶ್ಯವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಬುಲಂದ್‌ ಶಹರ್‌ ನ ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿದೆ.  ನಿಶಕ್ತ, ವಯಸ್ಸಾದ ಮಹಿಳೆ ತನ್ನ ಮಗನ ಕೈಯಿಂದ ತಪ್ಪಿಸಿಕೊಳ್ಳಲು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗುತ್ತಿದ್ದು, ಪುತ್ರ ಎಲ್ಲಿ ಹೋದರು ಬಿಡುವುದಿಲ್ಲ ಎಂಬಂತೆ ತಾಯಿಯನ್ನು ಅಟ್ಟಾಡಿಸುತ್ತಿರುವ ಭಯಾನಕ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ತಾಯಿಯ ಮೇಲೆ ಅಮಾನವೀಯ ಕೃತ್ಯ ನಡೆಸಿದ ವ್ಯಕ್ತಿ ದುರ್ಗೇಶ್ ಶರ್ಮಾ ಎಂದು ತಿಳಿದು ಬಂದಿದೆ. ಈತನಿಂದ ತಪ್ಪಿಸಿಕೊಳ್ಳಲು ವಯಸ್ಸಾದ ತಾಯಿ ಓಡಿ ಹೋಗಲು ಯತ್ನಿಸಿದ್ದಾರೆ. “ಯಾರಾದರೂ ಸಹಾಯ ಮಾಡಿ” ಎಂದು ಕಿರುಚುತ್ತಾ ಮಹಿಳೆ ಓಡಿ ಹೋಗುತ್ತಿದ್ದು, ಈ ಮನೆಯಿಂದ ಆ ಮನೆಗೆ ಓಡುತ್ತಾ, ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಹೃದಯ ವಿದ್ರಾವಕ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಒಂದು ಕೈಯಲ್ಲಿ ಜಾರಿ ಹೋಗುತ್ತಿರುವ ತನ್ನ ಬಟ್ಟೆಯನ್ನು ಹಿಡಿದುಕೊಂಡು ಮಹಿಳೆ ಓಡುತ್ತಿದ್ದರು. ಮಹಿಳೆ ಸಮೀಪದಲ್ಲಿ ಸಿಕ್ಕಾಗೆಲ್ಲ ಪಾಪಿ ಪುತ್ರ ಕೋಲಿನಿಂದ ಥಳಿಸುತ್ತಿದ್ದ. ಮಹಿಳೆ ಎಲ್ಲಿ ಹೋದರೂ ಬಿಡದೇ ಹಿಂಬಾಳಿಸುತ್ತಾ ಪುತ್ರ ಹಲ್ಲೆ ನಡೆಸುತ್ತಲೇ ಇದ್ದ. ಇತ್ತ ತಾಯಿಯನ್ನು ಮಗ ಥಳಿಸುತ್ತಿದ್ದರೆ, ಅತ್ತ ದೇವಸ್ಥಾನದಲ್ಲಿ ಸಂಜೆಯ ಪ್ರಾರ್ಥನೆಯ ಮಂತ್ರಘೋಷಗಳ ಪಠಣೆ ಕೇಳುತ್ತಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ