ಮಾತ್ರೆ ಖರೀದಿಸಿ ಕುಡಿಯುವ ಮುನ್ನವೇ ವ್ಯಕ್ತಿ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು: ಮಾತ್ರೆ ಖರೀಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ದೀಪ ನರ್ಸಿಂಗ್ ಹೋಂ ಬಳಿ ನಡೆದಿದೆ.
ವಿಶ್ವನಾಥ್ (65) ಮೃತಪಟ್ಟವರು. ಜೂನ್ 26 ರಂದು ಈ ಘಟನೆ ನಡೆದಿದೆ. ಮೆಡಿಕಲ್ ನಿಂದ ಮಾತ್ರೆ ತೆಗೆದುಕೊಂಡ ನಂತರ ನೀರು ತೆಗೆದುಕೊಂಡು ಕುಡಿಯಲು ಮುಂದಾದ ವೇಳೆ ಹೃದಯಾಘಾತ ಸಂಭವಿಸಿದೆ.
ಮೆಡಿಕಲ್ ಗೆ ಅಸ್ವಸ್ಥ ಸ್ಥಿತಿಯಲ್ಲಿ ತಲುಪಿದ್ದ ವ್ಯಕ್ತಿ ಮಾತ್ರೆ ತೆಗೆದುಕೊಂಡು, ಕುಡಿಯಲು ನೀರು ಕೇಳಿದ್ದಾರೆ. ಆದರೆ, ಕುಡಿಯುವ ಮುನ್ನವೇ ಅವರು ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಸಾರ್ವಜನಿಕರನ್ನು ಕಂಗೆಡಿಸಿದೆ. ಸಣ್ಣ ವಯಸ್ಸಿನವರು, ಮಧ್ಯ ವಯಸ್ಕರು ಎನ್ನುವ ಭೇದವಿಲ್ಲೇ ನಿರಂತರವಾಗಿ ಹೃದಯಾಘಾತದ ಪ್ರಕರಣಗಳು ನಡೆಯುತ್ತಿವೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ತೀವ್ರ ಆತಂಕವನ್ನುಂಟು ಮಾಡಿದೆ. ಸರ್ಕಾರ ಹೃದಯಾಘಾತ ಪ್ರಕರಣಗಳ ತನಿಖೆ ನಡೆಸಲು ಆದೇಶಿಸಿದೆ. ಆದರೆ ಕ್ಷಿಪ್ರಗತಿಯ ತನಿಖೆಯ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: