ಭಯಾನಕ: ಕೇಂದ್ರ ಸಚಿವರ ಮನೆ ಒಳಗಡೆ ವ್ಯಕ್ತಿಯ ಬರ್ಬರ ಹತ್ಯೆ - Mahanayaka

ಭಯಾನಕ: ಕೇಂದ್ರ ಸಚಿವರ ಮನೆ ಒಳಗಡೆ ವ್ಯಕ್ತಿಯ ಬರ್ಬರ ಹತ್ಯೆ

01/09/2023


Provided by

ಕೇಂದ್ರ ಸಚಿವ ಕೌಶಲ್ ಕಿಶೋರ್ ಎಂಬುವವರ ಹೊಸ ಮನೆಯ ಒಳಗಡೆ ಯುವಕನನ್ನು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಪೊಲೀಸರು ಸಚಿವರ ಮಗನ ಪಿಸ್ತೂಲ್ ಅನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಕೊಲೆಯಾದ ವಿಕಾಸ್ ಶ್ರೀವಾಸ್ತವ ಎಂಬಾತ ಸಚಿವ ಕಿಶೋರ್ ನ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ‌.

ಇತ್ತೀಚಿನ ಸುದ್ದಿ